Select Your Language

Notifications

webdunia
webdunia
webdunia
webdunia

ಅಕ್ರಮ ಆಯುಧ ಮಾರಾಟ-ಸಾಗಾಣಿಕೆ ಕಂಡು ಬಂದ್ರೆ ಹೀಗೆ ಮಾಡಿ

ಅಕ್ರಮ ಆಯುಧ ಮಾರಾಟ-ಸಾಗಾಣಿಕೆ ಕಂಡು ಬಂದ್ರೆ ಹೀಗೆ ಮಾಡಿ
ಕಲಬುರಗಿ , ಗುರುವಾರ, 20 ಫೆಬ್ರವರಿ 2020 (18:39 IST)
ಯಾವುದೇ ರೀತಿಯ ಅಕ್ರಮ ಆಯುಧಗಳ ಮಾರಾಟ, ಸಾಗಾಣಿಕೆ ಹಾಗೂ ಸಂಶಯಾಸ್ಪದ ವ್ಯಕ್ತಿಗಳು, ಸಂಸ್ಥೆಗಳು ಭಾಗಿಯಾಗಿರುವುದು ಕಂಡು ಬಂದಲ್ಲಿ ಹೀಗೆ ಮಾಡೋದಕ್ಕೆ ಮರೆಯಬೇಡಿ.

ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಆಯುಧಗಳ ಮಾರಾಟ, ಸಾಗಾಣಿಕೆ ಹಾಗೂ ಸಂಶಯಾಸ್ಪದ ವ್ಯಕ್ತಿಗಳು, ಸಂಸ್ಥೆಗಳು ಭಾಗಿಯಾಗಿರುವುದು ಕಂಡು ಬಂದಲ್ಲಿ ನೇರವಾಗಿ ಕಲಬುರಗಿ ಪೊಲೀಸ್ ಭವನದಲ್ಲಿರುವ ಡಿಸಿಆರ್‍ಬಿ ಘಟಕದ ಪೊಲೀಸ್ ಉಪನಿರೀಕ್ಷಕರಿಗೆ ಲಿಖಿತ, ದೂರವಾಣಿ ಮೂಲಕ ದೂರು ನೀಡಬಹುದು. ಹೀಗಂತ ಕಲಬುರಗಿ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಕಲಬುರಗಿ ಪೊಲೀಸ್ ಭವನದಲ್ಲಿರುವ ಡಿಸಿಆರ್‍ಬಿ ಘಟಕದ ಪೊಲೀಸ್ ಉಪನಿರೀಕ್ಷಕರಾದ ನಟರಾಜ ಲಾಡೆ ಅವರಿಗೆ ಲಿಖಿತ ಅಥವಾ ಮೊಬೈಲ್ ಸಂಖ್ಯೆ 9008208508ಗೆ ಸಂಪರ್ಕಿಸಿ ದೂರು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಪ್ರಾದೇಶಿಕ ಆಯುಕ್ತರಾಗಿ ಡಾ.ವಿ.ಎನ್.ಪ್ರಸಾದ್