Select Your Language

Notifications

webdunia
webdunia
webdunia
webdunia

ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿಗೆ ಪುನೀತ್ ರಾಜಕುಮಾರ್ ಡ್ಯಾನ್ಸ್

ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿಗೆ ಪುನೀತ್ ರಾಜಕುಮಾರ್ ಡ್ಯಾನ್ಸ್
ಬೆಂಗಳೂರು , ಶನಿವಾರ, 18 ಜನವರಿ 2020 (09:33 IST)
ಬೆಂಗಳೂರು: ಪುನೀತ್ ರಾಜಕುಮಾರ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ಮಾಯಾಬಜಾರ್ 2016 ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ.

ಈ ಹಾಡಿನ ಲಿರಿಕಲ್ ವಿಡಿಯೋ ಈಗ ಬಿಡುಗಡೆಯಾಗಿದೆ. ಮಾಯಾಬಜಾರ್ ಸಿನಿಮಾದ ಟೈಟಲ್ ಟ್ರ್ಯಾಕ್ ಗೆ ಧ್ವನಿ ನೀಡಿರುವವರು ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ. ಈ ಹಾಡಿಗೆ ಪುನೀತ್ ನೃತ್ಯ ಮಾಡಿದ್ದಾರೆ.

ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಚೈತ್ರಾ ರಾವ್, ಸುಧಾರಾಣಿ ಮುಂತಾದವರು ನಟಿಸಿದ್ದಾರೆ. ಪುನೀತ್ ಕೇವಲ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರಷ್ಟೇ. ಆದರೆ ಎಸ್ಪಿಬಿ ಹಾಡು ಮತ್ತು ಪುನೀತ್ ನೃತ್ಯದ ಈ ಅಪರೂಪದ ಕಾಂಬಿನೇಷನ್ ಈಗ ಹಿಟ್ ಆಗಿದೆ. ಮಾಯಾಬಜಾರ್ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಇದು ನೋಟು ಅಮಾನ್ಯೀಕರಣದ ಸುತ್ತ ಹಣೆಯಲಾದ ಕತೆ ಎಂಬ ಸುಳಿವು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಮನೆಯ ಸದಸ್ಯರಿಗೆ ಇಂದು ಡಬಲ್ ಎಲಿಮಿನೇಷನ್ ಭೀತಿ