Publish Date: Thu, 01 Aug 2019 (16:26 IST)
Updated Date: Thu, 01 Aug 2019 (16:29 IST)
ಮೈತ್ರಿ ಸರಕಾರದ ವಿಶ್ವಾಸ ಮತ ಯಾಚನೆ ಹಾಗೂ ಬಿಜೆಪಿ ಬಹುಮತ ಸಾಬೀತುಪಡಿಸೋವಾಗಲೂ ಸದನಕ್ಕೆ ಹಾಜರಾಗದ ಬಿಎಸ್ಪಿ ಶಾಸಕ ಎನ್.ಮಹೇಶ್ ಇದೀಗ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.
ಮಾಜಿ ಸಚಿವ ಎನ್. ಮಹೇಶ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಮಾಡಿದ್ದಾರೆ. ಆ ಮೂಲಕ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಅನ್ನೋದಕ್ಕೆ ಪುಷ್ಠಿ ಒದಗಿಸಿದ್ದಾರೆ.
ಬಿಜೆಪಿ ಪ್ರಮುಖ ನಾಯಕರು ಹಾಗೂ ಹಿರಿಯ ಶಾಸಕರೊಂದಿಗೆ ಸಿಎಂರನ್ನು ಭೇಟಿ ಮಾಡಿದ್ದಾರೆ ಎನ್.ಮಹೇಶ್. ಭೇಟಿ ಬಳಿಕ ಯಾವುದೇ ಹೇಳಿಕೆ ನೀಡಿಲ್ಲ.
ಬಿಎಸ್ಪಿ ಮುಖ್ಯಸ್ಥರಾದ ಮಾಯಾವತಿ ಅವರು ಎನ್.ಮಹೇಶ್ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಆದರೆ ಅವರಿಗೆ ಬಿಜೆಪಿ ಸರಕಾರದ ಮಂತ್ರಿ ಮಂಡಲದಲ್ಲಿ ಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.