Publish Date: Tue, 27 Nov 2018 (14:31 IST)
Updated Date: Tue, 27 Nov 2018 (14:33 IST)
ಬಳ್ಳಾರಿ ಜೈಲಿಗೆ ಹೋಗಲು ನಾವು ತಯಾರಿದ್ದೇವೆ. ಆದರೆ ಟೋಲ್ ನಿಲ್ಲಿಸಿ ಅಲ್ಲಿನ ಜನರು ಒತ್ತಾಯಿಸಿದ್ದಾರೆ.
ಕೆ.ಎ. 20 ವಾಹನಗಳಿಂದ ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಟೋಲ್ ಸಂಗ್ರಹಿಸದಂತೆ ನಾಗರಿಕರು ಪ್ರತಿಭಟನೆ ಹಾದಿ ತುಳಿದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವ ಪ್ರತಿಭಟನೆ ನಡೆದಿದೆ. ಸಾಸ್ತಾನ ಟೋಲ್ ಫ್ಲಾಜಾ ಎದುರು ಪ್ರೊಟೆಸ್ಟ್ ಮಾಡಿದ್ದು, ಟೋಲ್ ನಿಲ್ಲಿಸಿ, ನಾವು ಜೈಲಿಗೆ ಹೋಗಲು ರೆಡಿ. ಬಳ್ಳಾರಿ ಜೈಲಿಗೆ ಹೋಗಲು ತಯಾರಿದ್ದೇವೆ. ಆದರೆ ಟೋಲ್ ಸಂಗ್ರಹ ನಿಲ್ಲಲೇಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದರು.
ಸಂಬಂದಪಟ್ಟವರು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಬಿಡುಗಡೆಗೊಳಿಸಿದರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.