Publish Date: Tue, 27 Nov 2018 (14:29 IST)
Updated Date: Tue, 27 Nov 2018 (14:31 IST)
ಹಿರಿಯ ನಟ ಅಂಬರೀಶ್ ಇಹಲೋಕ ತ್ಯಜಿಸಿದ ಬೆನ್ನಲ್ಲೇ ಅವರ ಅಭಿನಯದ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ ಚಲನಚಿತ್ರ ಮತ್ತೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ.
ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವ ಅಲ್ಲದೇ ಹಿರಿಯ ನಟರಾಗಿರುವ ಅಂಬರೀಶ್ ಅವರ ಕೊನೆಯ ಚಿತ್ರವಾಗಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕ ಮುಂದಾಗಿದ್ದಾರೆ.
ಅಭಿಮಾನಿಗಳು ಸಹ ನಿರ್ಮಾಪಕರನ್ನು ಒತ್ತಾಯಿಸಿದ್ದು, ಚಿತ್ರ ಬಿಡುಗಡೆಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಚಿತ್ರ ಮರು ಪ್ರದರ್ಶನಗೊಳ್ಳಲಿದೆ.
ಅಂದ್ಹಾಗೆ ರೀ ರಿಲೀಸ್ ಮಾಡಿದ ನಂತರ ಬರುವ ಹಣವನ್ನು ಬಡಜನತೆಯ ಅಭಿವೃದ್ಧಿಗೆ ಬಳಸುವುದಾಗಿ ಹೇಳಿರುವ ಚಿತ್ರ ನಿರ್ಮಾಪಕ, ದಾನವೀರ ಶೂರ ಕರ್ಣ ಖ್ಯಾತಿಯ ಅಂಬರೀಶ್ ರ ನಡೆಯಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯ.