Select Your Language

Notifications

webdunia
webdunia
webdunia
webdunia

ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿಕೆ ಸುರೇಶ್ ಆಸ್ತಿ ವಿವರ ಹೀಗಿದೆ

DK Suresh

Krishnaveni K

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (11:10 IST)
Photo Courtesy: Twitter
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಾಲಿ ಸಂಸದ ಡಿಕೆ ಸುರೇಶ್ ತಮ್ಮ ಆಸ್ತಿ ವಿವರ ನೀಡಿದ್ದಾರೆ.

ನಿನ್ನೆ ಕಾಂಗ್ರೆಸ್ ನಾಯಕರ ಜೊತೆ ರೋಡ್ ಶೋ ನಡೆಸಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ತಮ್ಮ ಸ್ಥಿರ ಮತ್ತು ಚರಾಸ್ತಿಗಳ ವಿವರ ಸಲ್ಲಿಕೆ ಮಾಡಬೇಕಾಗುತ್ತದೆ. ಅದರಂತೆ ಡಿಕೆ ಸುರೇಶ್ ಕೂಡಾ ಆಸ್ತಿ ವಿವರ ನೀಡಿದ್ದಾರೆ.

ಅದರಂತೆ ಡಿಕೆ ಸುರೇಶ್ ಒಟ್ಟು ಆಸ್ತಿ ಮೌಲ್ಯ 593.04 ಕೋಟಿ ರೂ. ಎಂದು ತಿಳಿದುಬಂದಿದೆ. ಅಫಿಡವಿಟ್ ನಲ್ಲಿ ಕೃಷಿಕ, ಉದ್ಯಮಿ ಎಂದು ವಿವರ ನೀಡಿದ್ದಾರೆ. ಡಿಕೆ ಸುರೇಶ್ ಕೈಯಲ್ಲಿ 4.77 ಲಕ್ಷ ರೂ. ನಗದು, 106.71 ಕೋಟಿ ಚರಾಸ್ತಿ, 486.33 ಕೋಟಿ ರೂ. ಸ್ಥಿರಾಸ್ತಿಯಿದೆ ಎಂದು ಘೋಷಿಸಿದ್ದಾರೆ. ಅಣ್ಣ ಡಿಕೆ ಶಿವಕುಮಾರ್ ಗೆ 30.08 ಕೋಟಿ ರೂ. ಹಣ ಸಾಲ ನೀಡಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂ., ಡಿಕೆಶಿ ಪುತ್ರ ಆಕಾಶ್ ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ. ಕುಣಿಗಲ್ ಶಾಸಕ ರಂಗನಾಥ್ ಪತ್ನಿ ಡಾ. ಸುಮಾಗೆ 30 ಲಕ್ಷ ರೂ. ಸಾಲ ನೀಡಿರುವುದಾಗಿ ವಿವರ ನೀಡಿದ್ದಾರೆ.

8 ತಿಂಗಳಲ್ಲಿ ಆಸ್ತಿ ದಿಡೀರ್ ಏರಿಕೆ
ವಿಶೇಷವೆಂದರೆ 8 ತಿಂಗಳ ಹಿಂದೆ ವಿಧಾನಸಭೆ ಚುನಾವಣೆಗೆ ಕನಕಪುರದಿಂದ ಡಮ್ಮಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಡಿಕೆ ಸುರೇಶ್ ಆಸ್ತಿ 353.7 ಕೋಟಿ ರೂ. ಎಂದು ಘೋಷಿಸಿದ್ದರು. ಆದರೆ ಇದೀಗ ಎಂಟೇ ತಿಂಗಳಲ್ಲಿ 239.34 ಕೋಟಿ ರೂ.ಗಳಷ್ಟು ಆಸ್ತಿ ಹೆಚ್ಚಾಗಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಆಸ್ತಿ ಮೌಲ್ಯ 333.86 ಕೋಟಿ ರೂ. ಎಂದು ಘೋಷಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ಆಹ್ವಾನ ಬೆನ್ನಲ್ಲೇ ಎಚ್ಚೆತ್ತುಕೊಂಡು ಐಟಿ ಕಂಪನಿಗಳಿಗೆ ಅಭಯ ಕೊಟ್ಟ ಜಲಮಂಡಳಿ