Select Your Language

Notifications

webdunia
webdunia
webdunia
webdunia

ತಮಾಷೆಗೆ ಗುದದ್ವಾರಕ್ಕೆ ಏರ್‌ಫ್ರೆಷರ್‌ನಲ್ಲಿ ಗಾಳಿ ಬಿಟ್ಟ ಸ್ನೇಹಿತ: ಯುವಕ ಸಾವು

Air Freshner Pipe

Sampriya

ಬೆಂಗಳೂರು , ಗುರುವಾರ, 28 ಮಾರ್ಚ್ 2024 (21:16 IST)
ಬೆಂಗಳೂರು: ಏರ್‌ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯಲ್ಲಿನ ಕರುಳು ತುಂಡರಿಸಿ ಯುವಕ ಮೃತಪಟ್ಟಿರುವ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಮೃತ  ಯುವಕನನ್ನು ಆರ್. ಯೋಗೇಶ್ (24) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ 'ಸಿಎನ್‌ಎಸ್ ಕಾರ್ ಸ್ಪಾ' ಸರ್ವೀಸ್ ಮಳಿಗೆ ಕೆಲಸಗಾರ ಮುರುಳಿ ಅವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯೋಗೇಶ್ ಹಾಗೂ ಮುರುಳಿ ಹಲವು ವರ್ಷಗಳ ಸ್ನೇಹಿತರೆಂಬುದು ತನಿಖೆಯಿಂದ ಗೊತ್ತಾಗಿದೆ.   ತಮಾಷೆ ಮಾಡಲು ಹೋಗಿ ಈ ದೊಡ್ಡ ಅವಘಡ ಸಂಭವಿಸಿದೆ.

ಸ್ನೇಹಿತ ಕೆಲಸ ಮಾಡುತ್ತಿದ್ದ ಬೈಕ್ ಸರ್ವಿಸ್‌ ಮಳಿಗೆಗೆ ಯೋಗೇಶ್ ಆಗಾಗ ಹೋಗಿ ಮಾತಾಡಿಸಿಕೊಂಡು ಬರುತ್ತಿದ್ದ. 25ರಂದು ಯೋಗೇಶ್  ಬೈಕ್ ಸರ್ವೀಸ್ ಮಾಡಿಸಿಕೊಂಡು ಬರುವುದಾಗಿ ಹೋಗಿದ್ದಾನೆ.  

ಈ ವೇಳೆ ಮುರುಳಿ ಬಿಗಿದಪ್ಪಿ ಯೋಗೇಶ್ ಗುದದ್ದಾರಕ್ಕೆ ಪೈಪ್ ಹಿಡಿದಿದ್ದ: ಇದೇ ಸಂದರ್ಭದಲ್ಲಿ ಏರ್‌ ಪ್ರೆಷರ್ ಪೈಪ್‌ನಿಂದ ಗುದದ್ವಾರದೊಳಗೆ ಅತೀ ವೇಗದಲ್ಲಿ ಗಾಳಿ ನುಗ್ಗಿ, ಕರುಳು ತುಂಡರಿಸಿ, ಹೊಟ್ಟೆಯೊಳಗೆ ರಕ್ತಸ್ರಾವವಾಗಿತ್ತು.

ಯೋಗೇಶ್‌ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಏರುಪೇರು ನಿನ್ನೆ ಕೊನೆಯುಸಿರೆಳೆದಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ: ಪ್ರಮುಖ ಆರೋಪಿಯ ಬಂಧನ