Select Your Language

Notifications

webdunia
webdunia
webdunia
webdunia

ಟ್ಯಾಂಗರ್‌ ಮಾಫಿಯಾಗೆ ಶರಣಾದ ಸರ್ಕಾರ: ಜನರಿಂದ ಹಣ ಸುಲಿಗೆ ಎಂದ ಆರ್.ಅಶೋಕ್

R.Ashok

Sampriya

ಬೆಂಗಳೂರು , ಮಂಗಳವಾರ, 19 ಮಾರ್ಚ್ 2024 (16:22 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಟ್ಯಾಂಕರ್ ಮಾಫಿಯಾಗೆ ಶರಣಾಗಿ ಜನರಿಂದ ಸುಲಿಗೆ ಮಾಡಲು ಕೈಜೋಡಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮಾಡಿದರು. 
 
ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಮತ್ತೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಆರ್.ಆಶೋಕ್ ಅವರು ಎಕ್ಸ್‌ ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರದ ನಿಲುವಿನ ಬಗ್ಗೆ ಆಕ್ರೋಶ ಹೊರ ಹಾಕಿದರು. 
 
ಆರ್.ಅಶೋಕ್ ಎಕ್ಸ್‌ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ: 
ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲಾವಾಗಿರುವ ಸಿಎಂ @siddaramaiah ಹಾಗೂ ಡಿಸಿಎಂ @DKShivakumar
 ಅವರು ಟ್ಯಾಂಕರ್ ಮಾಫಿಯಾಗೆ ಸಂಪೂರ್ಣ ಶರಣಾಗಿ ಜನರನ್ನು ಸುಲಿಗೆ ಮಾಡಲು ತಾವೂ ಕೈಜೋಡಿಸಿದಂತಿದೆ.
 
ಗಡುವು ಮುಗಿದಿದ್ದರೂ ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದೆ ಅರ್ಧಕ್ಕರ್ಧದಷ್ಟು ಖಾಸಗಿ ಟ್ಯಾಂಕರ್ ಗಳು ಇನ್ನೂ ನೋಂದಣಿಯೇ ಮಾಡಿಕೊಂಡಿಲ್ಲ. ಕಾಟಾಚಾರಕ್ಕೆ ನೋಂದಣಿ ಮಾಡಿಕೊಂಡಿರುವ ಟ್ಯಾಂಕರ್ ಗಳು ಸರ್ಕಾರ ನಿಗದಿ ಮಾಡಿರುವ ದರಕ್ಕೆ ನೀರು ಕೊಡುತ್ತಿಲ್ಲ.
 
ಇಷ್ಟೆಲ್ಲಾ ಗೊಂದಲಗಳಿಂದ ನೀರಿಲ್ಲದೆ ಬೆಂಗಳೂರಿನ ಜನತೆ ಪರದಾಡುತ್ತಿದ್ದರೆ @INCKarnataka
 ಸರ್ಕಾರ ಏನೂ ಆಗಿಲ್ಲವೆಂಬಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.
 
ಸರ್ಕಾರಕ್ಕೆ ನಿಜವಾಗಲೂ ನೀರಿನ ಸಮಸ್ಯೆ ಬಗೆಹರಿಸುವ ಬದ್ಧತೆ ಇದ್ದರೆ ನೊಂದಣಿ ಮಾಡಿಕೊಳ್ಳದ, ಸರ್ಕಾರದ ನಿಯಮ ಪಾಲಿಸದ ಟ್ಯಾಂಕರ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ವಾರ್ಡ್ ಗಳಲ್ಲೂ ಮಾರ್ಷಲ್ ಗಳನ್ನು ನೇಮಿಸಿ ಟ್ಯಾಂಕರ್ ಗಳ ಮೇಲೆ ನಿಗಾ ಇಡಬೇಕು.
 
ಈಗಿರುವ ಸಹಾಯವಾಣಿ ಜನರಿಗೆ ಸ್ಪಂದಿಸಲು ವಿಫಲವಾಗಿದ್ದು, ಸರ್ಕಾರ ಖಾಸಗಿ ಸಂಸ್ಥೆಗಳ ಸಹಾಯದಿಂದ ಒಂದು ವಾರ್ಡ್ ಗೆ ಒಂದರಂತೆ  ಕನಿಷ್ಠ 200 ದೂರವಾಣಿ ಲೈನ್ ಗಳ ಸಂಪರ್ಕ ಹೊಂದಿರುವ ಕಾಲ್ ಸೆಂಟರ್ ತೆರೆದು ಜನರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಧರ್ಮಕ್ಕೆ ಅವಮಾನ ಆರೋಪ: ರಾಹುಲ್ ವಿರುದ್ಧ ಮತ್ತೇ ಗುಡುಗಿದ ಮೋದಿ