Publish Date: Tue, 19 Mar 2024 (13:15 IST)
Updated Date: Tue, 19 Mar 2024 (13:20 IST)
ಬೆಂಗಳೂರು: ಶಕ್ತಿಯನ್ನು ವಿನಾಶ ಮಾಡುವುದಕ್ಕಾಗಿ ಇಂಡಿ ಮೈತ್ರಿಕೂಟವನ್ನು ರಚಿಸಲಾಯಿತು ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡ ಅವರು, ನಮ್ಮ ಪರಂಪರೆಯಲ್ಲಿ ಶಕ್ತಿಗೆ ಮಾತೃ ಸ್ವರೂಪಿ ಸ್ಥಾನವಿದೆ. ಇಂತಹ ಶಕ್ತಿಯನ್ನು ವಿನಾಶ ಮಾಡಲು ಹೊರಟಿರುವ ರಾಹುಲ್ ಗಾಂಧಿ ನಡೆ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಎಂದಿದ್ದಾರೆ.
ಬೆಂಗಳೂರಿನ ಅಣ್ಣಮ್ಮದೇವಿಯಿಂದ
ಬೆಳಗಾವಿಯ ಸವದತ್ತಿ ಯಲ್ಲಮ್ಮನವರೆಗೆ
ಮೈಸೂರಿನ ಚಾಮುಂಡೇಶ್ವರಿಯಿಂದ
ಮಂಗಳೂರಿನ ಮಂಗಳಾದೇವಿವರೆಗೆ
ಕೋಲಾರದ ಕೋಲಾರಮ್ಮನಿಂದ
ಕಟೀಲು ದುರ್ಗಾಪರಮೇಶ್ವರಿವರೆಗೆ
ಬಾದಾಮಿಯ ಬನಶಂಕರಿಯಿಂದ
ಸಿಗಂದೂರು ಚೌಡೇಶ್ವರಿವರೆಗೆ
ಹೊರನಾಡು ಅನ್ನಪೂರಣೇಶ್ವರಿಯಿಂದ
ಕೊಲ್ಲೂರು ಮೂಕಾಂಬಿಕೆವರೆಗೆ
ಕರ್ನಾಟಕದ ಉದ್ದಗಲಕ್ಕೂ ಶಕ್ತಿ ದೇವತೆಗಳ ಅನೇಕ ತೀರ್ಥಕ್ಷೇತ್ರಗಳಿವೆ, ಕನ್ನಡಿಗರು ಶಕ್ತಿಯ ಆರಾಧಕರಾಗಿದ್ದರೆ.
ನಮ್ಮ ಪರಂಪರೆಯಲ್ಲಿ ಶಕ್ತಿಗೆ ಮಾತೃ ಸ್ವರೂಪಿ ಸ್ಥಾನವಿದೆ. ಇಂತಹ ಶಕ್ತಿಯನ್ನು ವಿನಾಶ ಮಾಡುವ @RahulGandhi
ಅವರ ಮಾತು ನೋಡಿದರೆ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.