Select Your Language

Notifications

webdunia
webdunia
webdunia
webdunia

'ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ' ಕಾರ್ಯಕ್ರಮ: ಯದುವೀರರನ್ನು ಭೇಟಿಯಾದ ಸಂಸದ ಪ್ರತಾಪ್ ಸಿಂಹ

Yaduveer Krishnadatta Chamaraja Odeyar

Sampriya

ಮೈಸೂರು , ಸೋಮವಾರ, 18 ಮಾರ್ಚ್ 2024 (14:48 IST)
Photo Courtesy X
ಮೈಸೂರು:  ಸಂಸದ ಪ್ರತಾಪ್ ಸಿಂಹ ಅವರು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು  'ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ' ಕಾರ್ಯಕ್ರಮದಲ್ಲಿ ಭೇಟಿಯಾದರು. 
 
ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ನೋವಲ್ಲಿ  ಈಚೆಗೆ ಸಂಸದ ಪ್ರತಾ‍ಪ್ ಅವರು ಯದುವೀರ್ ವಿರುದ್ಧ ಹೇಳಿಕೆ ನೀಡಿದ್ದರು. ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ತಣ್ಣಗಾದ ಬಳಿಕ ಬಿಜೆಪಿ ಟಿಕೆಟ್ ಯಾರಿಗೂ ಕೊಟ್ಟರೂ ನಾನು ಬೆಂಬಲಿಸುತ್ತೇನೆ ಎಂದಿದ್ದರು. ಬಿಜೆಪಿ ಟಿಕೆಟ್ ಯದುವೀರ್ ಅವರಿಗೆ ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದ ಅವರು ಈಗಿನಿಂದಲೇ ಪ್ರಚಾರ ಕಾರ್ಯ ಶುರು ಮಾಡೋಣ ಎಂದು ಆಹ್ವಾನಿಸಿದ್ದರು. 
 
ಪ್ರತಾಪ್ ಸಿಂಹ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು  'ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ' ಕಾರ್ಯಕ್ರಮದಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ. ಎಂದು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 
ಪತ್ರಕರ್ತ, ಅಂಕಣಗಾರರಾಗಿದ್ದ ಪ್ರತಾಪ್ ಅವರು 2009ರಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಳೆದ 10 ವರ್ಷಗಳ:ಇಂದ ಸಂಸದರಾಗಿದ್ದರು. ಕಳೆದ 10 ವರ್ಷದಲ್ಲಿ ಮಾಡಿದ್ದ ಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಮತ್ತೇ ಮೂರನೇ ಭಾರೀ ಸ್ಪರ್ಧೆಗೆ ತಯಾರಿಯಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ನಮಾಜ್ ವೇಳೆ ಹನುಮಾನ್ ಪಠಣ ಆರೋಪ: ಹಿಂದೂ ವ್ಯಕ್ತಿ ಮೇಲೆ ಅನ್ಯ ಕೋಮಿನ ಯುವಕರಿಂದ ಹಲ್ಲೆ