Select Your Language

Notifications

webdunia
webdunia
webdunia
webdunia

ಕೇಂದ್ರ ಗೃಹಸಚಿವ ಅಮಿತ್ ಶಾ ಗೂಂಡಾ, ರೌಡಿ ಎಂದ ಯತೀಂದ್ರ ಸಿದ್ದರಾಮಯ್ಯ

Yathindra Siddaramaiah

Krishnaveni K

ಚಾಮರಾಜನಗರ , ಶುಕ್ರವಾರ, 29 ಮಾರ್ಚ್ 2024 (09:46 IST)
ಚಾಮರಾಜನಗರ: ಲೋಕಸಭೆ ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರ ಮಾತಿನ ದಾಟಿ ಕೆಲವೊಮ್ಮೆ ಎಲ್ಲೆ ಮೀರುವುದು ಸಾಮಾನ್ಯ. ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ರೌಡಿ, ಗೂಂಡಾ ಎಂದು ನಿಂದಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಒಬ್ಬ ಗೂಂಡಾ, ಪ್ರಧಾನಿ ಮೋದಿ ಸುತ್ತಮುತ್ತ ಇರುವವರೆಲ್ಲಾ ಇಂತಹವರೇ ಎಂದು ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯತೀಂದ್ರ ಅಮಿತ್ ಶಾ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ಚಾಮರಾಜನಗರ ಅಮಿತ್ ಶಾ ಗುಜರಾತ್ ನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಪರಾಧ ಹಿನ್ನಲೆಯಿದೆ. ಆದರೆ ಈಗ ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇಂತಹವರೆಲ್ಲಾ ಪ್ರಧಾನಿ ಮೋದಿ ಸುತ್ತಮುತ್ತ ಇರುವವರು ಇಂತಹವರೇ ಎಂದು ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯತೀಂದ್ರ ನಿರುದ್ಯೋಗಿಗಳಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಈಗ ಉದ್ಯೋಗ ಸೃಷ್ಟಿ ನಮ್ಮ ಜವಾಬ್ಧಾರಿಯಲ್ಲ ಎನ್ನುತ್ತಿದೆ. 400 ಸೀಟು ಬಂದರೆ ಸಂವಿಧಾನ ಬದಲಾಯಿಸುವುದು ಅವರ ರಹಸ್ಯ ಅಜೆಂಡಾ. ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಎಂದಿದ್ದರೆ ಅದು ಮೋದಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಾಷೆಗೆ ಗುದದ್ವಾರಕ್ಕೆ ಏರ್‌ಫ್ರೆಷರ್‌ನಲ್ಲಿ ಗಾಳಿ ಬಿಟ್ಟ ಸ್ನೇಹಿತ: ಯುವಕ ಸಾವು