Select Your Language

Notifications

webdunia
webdunia
webdunia
webdunia

ಯಾವ ಹೃದಯ ರೀ..? ಡಾ ಸಿಎನ್ ಮಂಜುನಾಥ್ ಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಗುರುವಾರ, 28 ಮಾರ್ಚ್ 2024 (13:42 IST)
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿಕೆ ಸುರೇಶ್ ಇಂದು ನಾಮಪತ್ರ ಸಲ್ಲಿಕೆ ಮಾಡಿದರು.

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಮೊದಲು ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಸಾಥ್ ನೀಡಿದ್ದಾರೆ. ಈ ವೇಳೆ ಎದುರಾಳಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮಾಧ್ಯಮಗಳು ಪ್ರಶ್ನಿಸಿದವು.

ಬಿಜೆಪಿಯಿಂದ ಹೃದಯ ತಜ್ಞ ಡಾ ಸಿಎನ್ ಮಂಜುನಾಥ್ ಕಣಕ್ಕಿಳಿದಿದ್ದಾರೆ. ಜನ ಈ ಬಾರಿ ‘ಹೃದಯ’ ನೋಡಿ ವೋಟ್ ಹಾಕಲಿದ್ದಾರೆ ಎಂಬ ಮಾತಿದೆ ಎಂಬ ಬಗ್ಗೆ ಕೇಳಿದಾಗ ಸಿಎಂ ಸಿದ್ದು ‘ಯಾವ ಹೃದಯ ರೀ? ಡಾ ಸಿಎನ್ ಮಂಜುನಾಥ್ ಸರ್ಕಾರಿ ಕೆಲಸದಲ್ಲಿದ್ದವರು. ಈಗ ನಿವೃತ್ತರಾಗಿ ರಾಜಕಾರಣಕ್ಕೆ ಬಂದಿದ್ದಾರೆ. ಅದೇ ಡಿಕೆ ಸುರೇಶ್ ಹಗಲು ರಾತ್ರಿ ಎನ್ನದೇ ಈ ಕ್ಷೇತ್ರಕ್ಕಾಗಿ ದುಡಿದಿದ್ದಾರೆ. ಅವರು ಖಂಡಿತಾ ಗೆಲ್ಲುತ್ತಾರೆ’ ಎಂದಿದ್ದಾರೆ.

ಕಾಂಗ್ರೆಸ್ ನುಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಡಿಕೆ ಸುರೇಶ್ ಇಷ್ಟು ಸಮಯ ಸಂಸತ್ತಿನ ಹೊರಗೆ, ಒಳಗೆ ಈ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಜನ ಅವರ ಕೆಲಸ ನೋಡಿ ಖಂಡಿತವಾಗಿಯೂ ವೋಟ್ ಹಾಕುತ್ತಾರೆ ಎಂದು ಸಿಎಂ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಲಾ ಸೀತಾರಾಮನ್ ಯಾಕೆ ಚುನಾವಣೆಗೆ ನಿಂತಿಲ್ಲ? ಸಚಿವೆ ಕೊಟ್ಟ ಉತ್ತರ ಹೀಗಿದೆ