ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ವಿಚಾರ ಮತ್ತೆ ಭುಗಿಲೇಳುವ ಸೂಚನೆ ಕಂಡುಬರುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್ ಮೇಲೆ ಹೈಕಮಾಂಡ್ ನಾಯಕರು ಇಂಪ್ರೆಸ್ ಆಗಲು ಇದೊಂದು ವಿಚಾರ ಸಾಕು.
ಇತ್ತೀಚೆಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಕೊಂಡು ಡಿಕೆಶಿ-ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದರು. ಆದರೆ ತೆರೆಮರೆಯಲ್ಲಿ ಸಿಎಂ ಪಟ್ಟಕ್ಕಾಗಿ ಡಿಕೆಶಿ ಶತ ಪ್ರಯತ್ನ ನಡೆಸುತ್ತಿರುವುದಂತೂ ಸುಳ್ಳಲ್ಲ.
ಅಧಿವೇಶನ ಮುಗಿದ ಬಳಿಕ ಡಿಸೆಂಬರ್ 20-21 ರಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಸಮ್ಮುಖದಲ್ಲಿಯೇ ಸಭೆ ನಡೆಯಲಿದೆ ಎನ್ನಲಾಗಿದೆ. ಸದ್ಯಕ್ಕೆ ಹೈಕಮಾಂಡ್ ಗೆ ಡಿಕೆಶಿ-ಸಿದ್ದರಾಮಯ್ಯ ನಡುವೆ ಯಾರನ್ನು ಆಯ್ಕೆ ಮಾಡುವುದು ಎಂಬ ಸಂಕಟ ಎದುರಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಮೇಲೆ ಇಂಪ್ರೆಸ್ ಆಗಲು ಅವರ ತಾಳ್ಮೆಯೇ ಪ್ರಮುಖ ಕಾರಣವಾಗಬಹುದು. ಪಕ್ಷ ನಿಷ್ಠೆ ಎನ್ನುವುದಕ್ಕೆ ಮತ್ತೊಂದು ಹೆಸರೇ ಡಿಕೆಶಿ. ಹೈಕಮಾಂಡ್ ಹೇಳಿದ ಮೇಲೆ ಎಲ್ಲೂ ಅವರು ಬಹಿರಂಗ ಹೇಳಿಕೆ ನೀಡಿಲ್ಲ. ಬೆಂಬಲಿಗರ ಸಭೆಗೆ ಅವಕಾಶ ನೀಡಿಲ್ಲ. ಅವರ ತಾಳ್ಮೆಯೇ ಅವರಿಗೆ ವರವಾಗಬಹುದು ಎಂದು ನಿರೀಕ್ಷಿಸಲಾಗಿದೆ.