ಬೆಳಗಾವಿ: ವಿಧಾನಸಭೆ ಅಧಿವೇಶನದ ನಡುವೆಯೂ ಕಾಂಗ್ರೆಸ್ ನಲ್ಲಿ ಒಳಗೊಳಗೇ ಶಕ್ತಿ ಪ್ರದರ್ಶನ ನಡೆಯುತ್ತಿದೆ. ನಿನ್ನೆ ಸಿದ್ದರಾಮಯ್ಯ ಬೆಂಬಲಿತ ಶಾಸಕರಿಂದ ಡಿನ್ನರ್ ಮೀಟಿಂಗ್ ನಡೆದಿತ್ತು. ಇದಕ್ಕೆ ಆಹ್ವಾನವಿಲ್ಲದಿದ್ದರೂ ಡಿಕೆ ಶಿವಕುಮಾರ್ ಮಾಡಿದ್ದೇನು ಗೊತ್ತಾ?
ಹೈಕಮಾಂಡ್ ಹೇಳಿತೆಂದು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ ಬಳಿಕ ಡಿಕೆ ಶಿವಕುಮಾರ್ ಸೈಲೆಂಟ್ ಆಗಿದ್ದಾರೆ. ಯಾವುದೇ ವಿವಾದಿತ ಹೇಳಿಕೆ ಅಥವಾ ಮೀಟಿಂಗ್ ಗಳನ್ನು ನಡೆಸದೇ ತಾಳ್ಮೆಯಿಂದ ಕಾಯುತ್ತಿದ್ದಾರೆ. ಈ ನಡುವೆ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯೇ ಐದು ವರ್ಷವೂ ಸಿಎಂ ಎಂದರೂ ಹೆಚ್ಚೇನು ಪ್ರತಿಕ್ರಿಯಿಸುವ ಗೋಜಿಗೂ ಹೋಗಲಿಲ್ಲ.
ಕಳೆದ ಕೆಲವು ದಿನಗಳಿಂದ ಡಿಕೆ ಶಿವಕುಮಾರ್ ಮೌನ ಮತ್ತು ತಾಳ್ಮೆಯ ಅಸ್ತ್ರಕ್ಕೆ ಮೊರೆ ಹೋಗಿದ್ದಾರೆ. ಈ ಹಂತದಲ್ಲಿ ಯಾವುದೇ ಹೇಳಿಕೆಗಳು, ನಡೆ ಹೈಕಮಾಂಡ್ ಅಸಮಾಧಾನಕ್ಕೆ ಗುರಿಯಾಗಬಹುದು ಎಂಬ ಅರಿವು ಅವರಿಗಿದೆ. ಈ ಕಾರಣಕ್ಕೆ ಸೈಲೆಂಟ್ ಆಗಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರನ್ನು ಬೆಂಬಲಿಸುವ ಅಹಿಂದ ನಾಯಕರ ಬಣ ಬೆಳಗಾವಿಯಲ್ಲಿ ಡಿನ್ನರ್ ಮೀಟ್ ನಡೆಸಿದೆ. ಈ ಔತಣಕೂಟಕ್ಕೆ ಡಿಕೆಶಿ ಮತ್ತು ಅವರ ಬೆಂಬಲಿಗರಿಗೆ ಆಹ್ವಾನವಿರಲಿಲ್ಲ ಎನ್ನಲಾಗಿದೆ. ಹಾಗಿದ್ದರೂ ಡಿಕೆಶಿ ಈ ಕುರಿತು ಒಂದೇ ಒಂದು ಅಸಮಾಧಾನ ಅಥವಾ ಬಹಿರಂಗ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಅವರ ತಾಳ್ಮೆಯ ಬಗ್ಗೆ ಇಂದು ಸದನದಲ್ಲಿ ವಿಪಕ್ಷ ನಾಯಕರು ಡಿಕೆಶಿ ಕಾಲೆಳೆದಿದ್ದಾರೆ. ಆಗಲೂ ಕೇವಲ ನಗುವೇ ಅವರ ಉತ್ತರವಾಗಿತ್ತು ಎಂಬುದು ವಿಶೇಷ.