Daily Horoscope

Select Your Language

Notifications

webdunia
webdunia
webdunia
webdunia

ಸಿಎಂ ಸಾಹೇಬ್ರು ಮೆಟ್ರೋದಲ್ಲಿ... ಡಿಕೆ ಶಿವಕುಮಾರ್ ನೋಡಿ ಜನರು ಫುಲ್ ಸರ್ಪೈಸ್ Video

DK Shivakumar
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಡಿ.ಕೆ. ಶಿವಕುಮಾರ್ ಅವರು ಇಂದು ನಮ್ಮ ಮೆಟ್ರೋದಲ್ಲಿ ಅನಿರೀಕ್ಷಿತ ಪ್ರಯಾಣ ಮಾಡುವ ಮೂಲಕ ಸಾರ್ವಜನಿಕರಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.  ಮುಖ್ಯಮಂತ್ರಿಯಾದ ನಂತರ ತಮ್ಮ ಸ್ವಕ್ಷೇತ್ರವಾದ ಕನಕಪುರಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ತೆರಳುತ್ತಿದ್ದ ಅವರು, ಈ ವಿಭಿನ್ನ ಮತ್ತು ಜನಸ್ನೇಹಿ ನಿರ್ಧಾರವನ್ನು ಕೈಗೊಂಡರು.

ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಕಾನ್ವಾಯ್ ರಸ್ತೆಯಲ್ಲಿ ಚಲಿಸುವಾಗ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸಂಚಾರವನ್ನು ತಡೆಯಲಾಗುತ್ತದೆ. ಇದರಿಂದಾಗಿ ಬೆಂಗಳೂರಿನ ಜನಸಾಮಾನ್ಯರಿಗೆ ಮತ್ತು ವಾಹನ ಸವಾರರಿಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. 

ತಮ್ಮ ಸದಾಶಿವನಗರ ನಿವಾಸದಿಂದ ಕನಕಪುರ ರಸ್ತೆಯವರೆಗೆ ರಸ್ತೆ ಮಾರ್ಗವಾಗಿ ಚಲಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತ ಸಿಎಂ ಡಿ.ಕೆ. ಶಿವಕುಮಾರ್, ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ನಿರ್ಧರಿಸಿದರು.

ಸಿಎಂ ಅವರು ವಿಧಾನ ಸೌಧ ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆಯ ಕೊನೆಯ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಅಲ್ಲಿಂದ ಮುಂದೆ ಅವರು ರಸ್ತೆ ಮಾರ್ಗದ ಮೂಲಕ ಕನಕಪುರ ತಾಲೂಕಿನ ಹಾರೋಹಳ್ಳಿ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿದರು. ಮೆಟ್ರೋ ರೈಲಿನ ಒಳಗೆ ಮುಖ್ಯಮಂತ್ರಿಗಳನ್ನು ಹಠಾತ್ತನೆ ಕಂಡ ಸಹಪ್ರಯಾಣಿಕರು ಆಶ್ಚರ್ಯಚಕಿತರಾದರು.  ಜೊತೆಗೆ ಸಿಎಂ ಜೊತೆಗೆ ಎಲ್ಲರೂ ಸೆಲ್ಫೀ, ಶೇಕ್ ಹ್ಯಾಂಡ್ ಮಾಡಿಕೊಂಡು ಖುಷಿ ಪಟ್ಟರು. ಸಿಎಂ ಕೂಡಾ ಎಲ್ಲರ ಜೊತೆ ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

pic.twitter.com/8vMjHkjxPD

 

— ????Che_ಕೃಷ್ಣ????????????❤️ (@ChekrishnaCk) June 7, 2026

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಾರಿಕೆಯೆಂದು ಬಂದ ಹಸು ಬೋರ್ ವೆಲ್ ನೋಡಿ ಏನು ಮಾಡ್ತು ನೋಡಿ Video