Publish Date: Fri, 05 Jun 2026 (08:57 IST)
Updated Date: Fri, 05 Jun 2026 (08:59 IST)
ಬೆಂಗಳೂರು: ಬೇರೆ ಎಲ್ಲದಕ್ಕೂ ನಾನು ಬೇಕು, ಬೆಂಗಳೂರಿನ ಖಾತೆಗೆ ಏಕೆ ಬೇಡ.. ಹೀಗಂತ ಸಿಎಂ ಡಿಕೆ ಶಿವಕುಮಾರ್ ಮುಂದೆಯೇ ಸಚಿವ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆ ಶಿವಕುಮಾರ್ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ 13 ಶಾಸಕರ ಪೈಕಿ ರಾಮಲಿಂಗಾ ರೆಡ್ಡಿ ಕೂಡಾ ಒಬ್ಬರು. ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎಂಬ ಬೇಡಿಕೆಯಿತ್ತು. ಆದರೆ ಆ ಖಾತೆಯ ಬದಲು ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಇದು ಅವರ ಬೇಸರಕ್ಕೆ ಕಾರಣವಾಗಿದೆ.
ಕಳೆದ ಬಾರಿಯೂ ನನಗೆ ಇಷ್ಟವಿಲ್ಲದ ಖಾತೆ ನೀಡಲಾಗಿತ್ತು. ನಾನು ಅತ್ಯಂತ ಹಿರಿಯನಿದ್ದೇನೆ. ನನಗೆ ಬೆಂಗಳೂರು ಖಾತೆ ಕೊಡುವುದಕ್ಕೆ ಏನು ಕಷ್ಟ? ಬೇರೆ ಎಲ್ಲದಕ್ಕೂ ಬೆಂಗಳೂರಿಗೆ ನಾನು ಬೇಕು? ಖಾತೆ ಯಾಕೆ ಕೊಡಲ್ಲ? ಜಲಸಂಪನ್ಮೂಲ ಖಾತೆಗೂ ನನಗೂ ಏನು ಸಂಬಂಧ? ಎಂದು ರಾಮಲಿಂಗಾ ರೆಡ್ಡಿ ಸಿಎಂ ಡಿಕೆ ಶಿವಕುಮಾರ್ ಎದುರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲ ತಮ್ಮ ಖಾತೆ ಬದಲಾವಣೆ ಮಾಡದೇ ಇದ್ದಲ್ಲಿ ರಾಜೀನಾಮೆ ಕೊಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆಯೂ ಸಿಎಂ ಜೊತೆ ಸಭೆ ನಡುವೆ ಅವರು ಅರ್ಧದಿಂದಲೇ ಎದ್ದು ಹೋಗಿದ್ದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ