Select Your Language

Notifications

webdunia
webdunia
webdunia
webdunia

Video: ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

DK Shivakumar
ಬೆಂಗಳೂರು: ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು.. ಹೀಗಂತ ಮೊದಲ ಪತ್ರಿಕಾಗೋಷ್ಠಿಯಲ್ಲೇ ಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.

ನಿನ್ನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನೇರವಾಗಿ ವಿಧಾನಸೌಧಕ್ಕೆ ತೆರಳಿದ ಸಿಎಂ ಡಿಕೆ ಶಿವಕುಮಾರ್ ಮೊದಲ ಸಚಿವ ಸಂಪುಟ ಸಭೆ ನೆರವೇರಿಸಿದರು. ಈ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಈ ವೇಳೆ ಸಿಎಂ ಚೇರ್ ಹಿಂದೆ ಕೆಲವು ಜನ ಕೂತಿದ್ದನ್ನು ನೋಡಿ ಡಿಕೆ ಶಿವಕುಮಾರ್ ಗರಂ ಆದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವ ಮೊದಲೇ ನನ್ನ ಹಿಂದೆ ಯಾರು ಕೂತಿದ್ದಾರೋ ಅವರೆಲ್ಲಾ ಮೊದಲು ಎದ್ದು ಹೋಗಿ. ಯಾರೂ ನನ್ನ ಹಿಂದೆ ಕೂತ್ಕೋಬಾರ್ದು. ಸುಮ್ನೇ ಫೋಟೋಗೆ ಪೋಸ್ ಕೊಟ್ಕೊಂಡು ಕೂತ್ಕೋಬಾರ್ದು. ಯಾರಾದರೂ ಒಬ್ಬರು ಅಧಿಕಾರಿ ನನ್ನ ಜೊತೆಗೆ ಕೂತರೆ ಸಾಕು. ಬೇರೆ ಯಾರೂ ಇಲ್ಲಿ ಕೂರೋದು ಬೇಡ ಎಂದು ಡಿಕೆ ಶಿವಕುಮಾರ್ ಖಡಕ್ ಆಗಿ ಹೇಳಿದರು. ಸಿಎಂ ಹೀಗೆ ಹೇಳುತ್ತಿದ್ದಂತೇ ಅವರ ಹಿಂದೆ ಕೂತಿದ್ದವರೆಲ್ಲಾ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಈ ಎಲ್ಲಾ ನಾಯಕರಿಗೆ ಮಂತ್ರಿಗಿರಿ ಕೊಡಬೇಕು, ಇಲ್ಲಾಂದ್ರೆ... ಮುಸ್ಲಿಂ ಮುಖಂಡರಿಂದ ಕಾಂಗ್ರೆಸ್ ಗೆ ಎಚ್ಚರಿಕೆ