Select Your Language

Notifications

webdunia
webdunia
webdunia
Friday, 11 April 2025
webdunia

ಪಕ್ಷ ಬಿಟ್ಟು ಹೋದವರ ವಿಚಾರದಲ್ಲಿ ಡಿಕೆಶಿ-ಸಿದ್ದರಾಮಯ್ಯ ಭಿನ್ನಮತ

ಡಿಕೆ ಶಿವಕುಮಾರ್
ಬೆಂಗಳೂರು , ಭಾನುವಾರ, 4 ಜುಲೈ 2021 (08:51 IST)
ಬೆಂಗಳೂರು: ಪಕ್ಷ ಬಿಟ್ಟು ಹೋದವರು ಮರಳುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಭಿನ್ನಮತ ಏರ್ಪಟ್ಟಿದೆ.


ಪಕ್ಷ ಬಿಟ್ಟು ಬಿಜೆಪಿ ಸೇರಿಕೊಂಡವರು ಮರಳಿ ಪಕ್ಷಕಕ್ಕೆ ಬಂದರೆ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಮ್ಮ ಲೀಡರ್ ಶಿಪ್ ಒಪ್ಪಿ ಪಕ್ಷಕಕ್ಕೆ ಬರುವುದಾದರೆ ಬರಲಿ ಎಂದಿದ್ದಾರೆ.

ಆದರೆ ಸಿದ್ದರಾಮಯ್ಯ ಮಾತ್ರ ಪಕ್ಷ ಬಿಟ್ಟು ಹೋದವರಿಗೆ ಮರಳಿ ಬಾಗಿಲು ತೆರೆಯಲು ಬಿಲ್ ಕುಲ್ ನೋ ಎನ್ನುತ್ತಿದ್ದಾರೆ. ಪಕ್ಷಕ್ಕೆ ಕೈ ಕೊಟ್ಟು ಹೋದವರನ್ನು ಮರಳಿ ಸ್ವೀಕರಿಸುತ್ತೇವೆ ಎಂದು ಯಾರೂ ಹೇಳಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇತ್ತೀಚೆಗೆ ಸಿಎಂ ಅಭ್ಯರ್ಥಿ ವಿಚಾರದಲ್ಲಿ ಇಬ್ಬರು ನಾಯಕರ ನಡುವೆ ಭಿನ್ನಮತವೇರ್ಪಟ್ಟಿತ್ತು. ಈಗ ಪಕ್ಷಕ್ಕೆ ಮರು ಸೇರ್ಪಡೆಯಾಗುವವರ ವಿಚಾರದಲ್ಲಿ ಅಂತಹದ್ದೇ ವಿರುದ್ಧ ಹೇಳಿಕೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಬಲೂನ್ ತೆಗೆಯಿತು ಪ್ರಾಣ!