Select Your Language

Notifications

webdunia
webdunia
webdunia
webdunia

ಯೂತ್ ಕಾಂಗ್ರೆಸ್ ಗಲಾಟೆ- ಟಗರು-ಬಂಡೆ ನಡುವೆ ವಾರ್ ಶುರು..!

ಯೂತ್ ಕಾಂಗ್ರೆಸ್ ಗಲಾಟೆ- ಟಗರು-ಬಂಡೆ ನಡುವೆ ವಾರ್ ಶುರು..!
bangalore , ಶನಿವಾರ, 3 ಜುಲೈ 2021 (19:02 IST)
ಬೆಂಗಳೂರು: ಪದಾಧಿಕಾರಿಗಳ ಆಯ್ಕೆ ವಿಚಾರ ಆಯ್ತು, ಯೂತ್ ಕಾಂಗ್ರೆಸ್ ಗಲಾಟೆ ಆಯ್ತು. ಇದೀಗ ವಲಸೆ ನಾಯಕರ ವಿಚಾರವಾಗಿ ಟಗರು-ಬಂಡೆ ನಡುವೆ ವಾರ್ ಶುರುವಾದಂತಿದೆ. ಮೈತ್ರಿ ಸರ್ಕಾರವನ್ನ ಕೆಡವಿ ಹೋಗಿದ್ದವರಿಗೆ ಡಿ.ಕೆ ಶಿವಕುಮಾರ್ ಮತ್ತೆ ಗಾಳ ಹಾಕಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಡಿಚ್ಚಿ ಕೊಟ್ಟಿದ್ದಾರೆ.ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನ ಕೆಡವಿದವರ ಮೇಲೆ ಡಿ.ಕೆ ಶಿವಕುಮಾರ್‌ಗೆ ಇದ್ದಕ್ಕಿದ್ದಂತೆ ಪ್ರೀತಿ ಹುಟ್ಟಿದಂತಿದೆ. ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇರೋರು ಯಾರ್ ಬೇಕಾದ್ರೂ ಪಕ್ಷಕ್ಕೆ ಬರಬಹುದು. ಅರ್ಜಿ ಹಾಕಿದ್ಮೇಲೆ ಸ್ಟ್ಯಾಂಡ್ ತೆಗೆದುಕೊಳ್ತೇವೆ ಎಂದ್ರು. 17 ಜನ ವಲಸೆ ನಾಯಕರೂ ಕೂಡ ಅರ್ಜಿ ಹಾಕಬಹುದಾ ಅನ್ನೋದಕ್ಕೆ, ಯಾರು ಬೇಕಾದ್ರೂ ಅರ್ಜಿ ಹಾಕಬಹುದು. ರಾಜಕೀಯದಲ್ಲಿ ಏನುಬೇಕಾದರು ಆಗಬಹುದು ಅಂತಾ ವಲಸಿಗರಿಗೆ ಪರೋಕ್ಷವಾಗಿ ಆಹ್ವಾನ ನೀಡಿದರು.ಇನ್ನು ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪಕ್ಷ ಬಿಟ್ಟು ಹೋದವರನ್ನ ಕರೆಯಲ್ಲ ಅಂತಾ ಖಡಾಖಂಡಿತವಾಗಿ ಮಾತನಾಡಿದ್ದಾರೆ. ಪಕ್ಷ ಬಿಟ್ಟು ಹೋದ 14  ಜನರನ್ನ ಮತ್ತೆ ಬನ್ನಿ ಅಂತ ಡಿ.ಕೆ ಶಿವಕುಮಾರ್ ಹೇಳಿದ್ದಾರಾ..? ಅವ್ರು ಪಕ್ಷ ತೊರೆದು ಹೋದವ್ರು. ನಾನು ಬನ್ನಿ ಎಂದು ಹೇಳಲ್ಲ. ಅಧ್ಯಕ್ಷರ ಜತೆನೂ ಮಾತನಾಡ್ತೀನಿ ನಡೀರಿ ಅಂತ ಸಿದ್ದರಾಮಯ್ಯ ಗರಂ ಆದರೂ ಇದನ್ನೆಲ್ಲಾ ನೋಡುತ್ತಾ ಇದ್ದಾರೆ. ಡಿಕೆಶಿ-ಸಿದ್ದು ನಡುವೆ ಕೋಲ್ಡ್‌ವಾರ್ ನಿಲ್ಲೋದೇ ಇಲ್ಲ ಅನ್ಸುತ್ತೆ. ಆ ಕಡೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ, ಆಗಸ್ಟ 17 ಜನ ನನ್ನ ಕಾಪಾಡಿದರು ಅಂತಾ ವಲಸಿಗರ ಪರವಾಗಿ ಮೃಧುವಾಗಿ ಮಾತನಾಡೋಕೆ ಶುರು ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಕೂಡ ಅರ್ಜಿ ಆಹ್ವಾನ ಮಾಡಿರೋದನ್ನ ನೋಡಿದ್ರೆ, ಇವ್ರ ಲೆಕ್ಕಾಚಾರಗಳೇ ಬೇರೆ ಅನ್ನೋದು ಕನ್ಫರ್ಮ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ವೈಗೆ ಸಂಕಷ್ಟ: ಡೀನೋಟಿಫಿಕೇಶನ್ ಕೇಸ್