Select Your Language

Notifications

webdunia
webdunia
webdunia
webdunia

ಪಾಲಿಕೆ ಮುಖ್ಯ ಆಯುಕ್ತರಿಂದ ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ತಪಾಸಣೆ: ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು

ಪಾಲಿಕೆ ಮುಖ್ಯ ಆಯುಕ್ತರಿಂದ ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ತಪಾಸಣೆ: ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು
bangalore , ಶನಿವಾರ, 3 ಜುಲೈ 2021 (18:36 IST)
ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯ ಸಂಜಯ್‌ನಗರದ 80 ಅಡಿ ರಸ್ತೆಯಲ್ಲಿ ಅಶ್ವಥ್ ನಗರದ ದ್ವಾರದಿಂದ ಎಂ.ಎಸ್ .ರಾಮಯ್ಯ ಆಸ್ಪತ್ತೆಯ ರಸ್ತೆಯ ಸ್ನಿಗಲ್ ವರೆಗೆ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. 
 
ಪಾಲಿಕೆಯ ಯೋಜನಾ ವಿಭಾಗದಿಂದ ಸಂಜಯ್‌ನಗರದ 80 ಅಡಿ ರಸ್ತೆಯು ಸುಮಾರು 1 ಕಿ.ಮೀ ಇದ್ದು, 9.82 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಮೇ ಅಂತ್ಯದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡು 30 ದಿನಗಳಲ್ಲಿ ಎರಡೂ ಬದಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿರುತ್ತದೆ. ಈ ಪೈಕಿ ಒಂದು ಬದಿಯಲ್ಲಿ ಕ್ಯೂರಿಂಗ್ ಆಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಮತ್ತೊಂದು ಬದಿ ಕ್ಯೂರಿಂಗ್ ಬಾಕಿಯಿದೆ. ಅದಲ್ಲದೆ ರಸ್ತೆಯ ಎರಡೂ ಬದಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ನೀರಿನ ಪೈಪ್ ಲೈನ್, ಬೆಸ್ಕಾಂ, ಒಎಫ್‌ಸಿ ಕೇಬಲ್‌ಗಳಿಗೆ ಡಕ್ಟ್ಸ್ ಅಳವಡಿಕೆ, ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರೆ ಸಿವಿಲ್ ಕಾಮಗಾರಿ ಬಾಕಿಯಿದ್ದು, 35 ರಿಂದ 40 ದಿನಗಳಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 
 
ಈ ವೇಳೆ ಆಯುಕ್ತರು ಮಾತನಾಡಿ, ಕ್ಯೂರಿಂಗ್ ಆದ ಕೂಡಲೆ ಎರಡೂ ಕಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ, ಜೊತೆಗೆ ಬಾಕಿಯಿರುವ ಕಾಮಗಾರಿಯನ್ನು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಝೆಡ್ ಪಿ, ಟಿಪಿ ಮೀಸಲು - ಶಾಸಕರ ಅಸಮಾಧಾನ ಕೋರ್ಟ್ ಮೆಟ್ಟಿಿಲೇರಲು ಶಾಸಕರ ಚಿಂತನೆ