Select Your Language

Notifications

webdunia
webdunia
webdunia
Thursday, 10 April 2025
webdunia

ಕಾಂಗ್ರೆಸ್ ನಿಂದ ಬಿಜೆಪಿ ಅಧಿಕಾರಕ್ಕೆ

bangalore
bangalore , ಗುರುವಾರ, 1 ಜುಲೈ 2021 (15:49 IST)
ಎಚ್.ಡಿ. ಕುಮಾರಸ್ವಾಮಿ 
ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಜೆಡಿಎಸ್ ನಿಂದ ಅಲ್ಲ. ಕಾಂಗ್ರೆಸ್ ನಿಂದ. ಇದನ್ನು ಮುಸ್ಲಿಮ್ ಬಾಂಧವರು ಅರಿತುಕೊಳ್ಳಬೇಕು ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯವನ್ನು ಆ ದಿನದಲ್ಲಿ ಬಿಜೆಪಿ ಲೂಟಿ ಮಾಡುತ್ತಿದೆ. ರೈತರ ಪರ ಎಂದು ಹೇಳುವ ಬಿಜೆಪಿ, ಅವತ್ತು ರೈತರ ಮೇಲೆ ಗೋಲಿ ಬಾರ್ ಮಾಡಿಸಿತ್ತು ಎಂದರು.
ಸಿದ್ದರಾಮಯ್ಯ ಏನೋ ದೊಡ್ಡ ಅಧಿಕಾರ ನಡೆಸಿದೆ ಎಂದು ಹೇಳುತ್ತಾರೆ. ಏನೋ ದೊಡ್ಡ ಆಡಳಿತ ನೆಡೆಸಿರುವ ಮಾತನಾಡುತ್ತಾರೆ. ಜೆಡಿಎಸ್ ಪಕ್ಷ ಮುಗಿದೇ ಹೋಯಿತು ಎಂದು ಹೇಳುತ್ತಿದ್ದಾರೆ. ಅಧಿವೇಶನ ಬರಲಿ ನಾವು ಏನು ಅಂತ ತೋರಿಸುತ್ತೇನೆ. ನಮ್ಮ ಆಟ ತೋರಿಸುತ್ತೇವೆ ಎಂದು ಅವರು ಹೇಳಿದರು.
ಜನರಿಗೆ ಪಂಚರತ್ನ ಯೋಜನೆ ಕೊಡಲು ತಯಾರಿ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಜೆಡಿಎಸ್ ಬಾಗಿಲು ತೆಗೆಯುವ ಕೆಲಸ ಮಾಡುತ್ತದೆ. ಪ್ರಾದೇಶಿಕ ಪಕ್ಷಕ್ಕೆ ಬಲ ತುಂಬಲು ಯಾರೇ ಬಂದರೂ ಜೆಡಿಎಸ್ ಸ್ವಾಗತ ಮಾಡುತ್ತದೆ ಎಂದು ಕುಮಾರಸ್ವಾಮಿ ಬಹಿರಂಗ ಆಹ್ವಾನ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜಯದೇವ ಸಂಸ್ಥೆ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಅವರ ಸೇವೆ ವಿಸ್ತರಣೆ