Select Your Language

Notifications

webdunia
webdunia
webdunia
webdunia

ಜಯದೇವ ಸಂಸ್ಥೆ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಅವರ ಸೇವೆ ವಿಸ್ತರಣೆ

bangalore
bangalore , ಗುರುವಾರ, 1 ಜುಲೈ 2021 (15:47 IST)
ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಸೇವೆಯನ್ನು ಒಂದು ವರ್ಷಗಳ ಕಾಲ (2022 ಜೂನ್ ತನಕ) ವಿಸ್ತರಿಸಲಾಗಿದೆ.
ಡಾ.ಮಂಜುನಾಥ್ ಅವರ ವಿಸ್ತರಿತ ಸೇವಾ ಅವಧಿ ಜೂನ್ 30ಕ್ಕೆ ಅಂತ್ಯವಾಗಿತ್ತು.  ಕೋವಿಡ್ ಸಂದರ್ಭದಲ್ಲಿ ಅನುಭವಿ ವೈದ್ಯ ಡಾ.ಮಂಜುನಾಥ್ ಸೇವೆಯನ್ನು ವಿಸ್ತರಿಸುವಂತೆ ಹಲ ಪ್ರಮುಖರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದರು.
ಪ್ರಸ್ತುತ ಸನ್ನಿವೇಶ ಗಮನಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಾ.ಮಂಜುನಾಥ್ ಅವರ ಸೇವಾವಧಿ ವಿಸ್ತರಿಸಿ ಸೋಮವಾರ ಆದೇಶ ಹೊರಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬದಲಾವಣೆ ಖಚಿತ