Publish Date: Sat, 03 Jul 2021 (14:44 IST)
Updated Date: Sat, 03 Jul 2021 (14:50 IST)
ಮಂಡ್ಯ ಮನ್ ಮುಲ್ ಹಾಲು ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್, ಕಾಂಗ್ರೆಸ್ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆಡಿಯೋ ತಿರುಚಿ ಹೆಚ್ಡಿಕೆ ಅನುಕಂಪ ಗಿಟ್ಟಿಸಿಕೊಳ್ಳಬಾರದು. ಎರಡು ಬಾರಿ ಸಿಎಂ ಆದವರು ನನ್ನ ಆಡಿಯೋ ವಿಚಾರದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಬಾರದು. ದೇವೆಗೌಡರಿಗೆ ನಾನು ಕುಮಾರಸ್ವಾಮಿಗಿಂತ ಹೆಚ್ಚಿನ ಗೌರವ ಕೊಡ್ತೀನಿ. ನನ್ನ ಜೊತೆ ಚರ್ಚೆ ಮಾಡುವುದಾದರೆ ಬರಲಿ. ಯಾವ ಯಾವ ಸಮಯದಲ್ಲಿ ದೇವೇಗೌಡರ ಬಗ್ಗೆ ಏನೇನ್ ಮಾತನಾಡಿದ್ದಾರೆ ಹೇಳ್ತೀನಿ ಅಂತ ಹೆಚ್ಡಿಕೆ ಗೆ ಸವಾಲು ಎಸೆದಿದ್ದಾರೆ. ನನ್ನ ಮನೆ ಗೃಹ ಪ್ರವೇಶ ಪೂಜೆಯನ್ನ ದೇವೆಗೌಡ ಚೆನ್ನಮ್ಮ ಕೈಯಲ್ಲಿ ಮಾಡಿಸಿದ್ದೆ. ಇವರ ಮನೆ ಗೃಹಪ್ರವೇಶವನ್ನ ಮಾಡಿಸಿದ್ರೋ ಏನೋ ಗೊತ್ತಿಲ್ಲ. ಅಂತ ಕುಮಾರಸ್ವಾಮಿ ವಿರುದ್ದ ಹರಿಯಾಯ್ದಿದ್ದಾರೆ.