Publish Date: Sat, 03 Jul 2021 (14:29 IST)
Updated Date: Sat, 03 Jul 2021 (14:33 IST)
ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಅವದೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ ಎಂದು ನಿನ್ನೆ ಗುರೂಜಿಯನ್ನ ಭೇಟಿಯಾಗಿದ್ದ ಹೆಚ್ ಡಿ ಕೆ ಮಾಜಿ ಪರಿಷತ್ ಸದಸ್ಯ ಶರವಣ ನಿವಾಸದಲ್ಲಿ ಹೆಚ್ಡಿಕೆ ಭೇಟಿ ಮಾಡಿ ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಅಧಿಕಾರ ನಡೆಸುತ್ತದೆ .ನಿಖಿಲ್ ಕುಮಾರಸ್ವಾಮಿಗೆ ಉತ್ತಮ ಭವಿಷ್ಯ ವಿದೆ.ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಶಾಸಕರಾಗುತ್ತಾರೆ.ನಿಖಿಲ್ ಕುಮಾರಸ್ವಾಮಿ ಗಂಡು ಮಗು ಜನಿಸುತ್ತದೆ ಎಂದು ಸಹ ಭವಿಷ್ಯ ನುಡಿದಿದ್ದಾರೆ.