ಬೆಳಗಾವಿ: ಡಿನ್ನರ್ ಮೀಟಿಂಗ್ ಗದ್ದಲದ ನಡುವೆ ಸಿಎಂ ಮತ್ತು ಡಿಸಿಎಂಗೆ ದೆಹಲಿಗೆ ಬರಲು ಬುಲಾವ್ ನೀಡಲಾಗಿದೆ. ಇದರ ಹಿಂದೆ ಒಂದು ಕಾರಣವೂ ಇದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಅಧಿವೇಶನದ ನಡುವೆಯೂ ಏನಿಲ್ಲಾ ಏನಿಲ್ಲಾ ಎಂದು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಸೌಹಾರ್ದಯುತ ಔತಣ ಕೂಟ ಎಂದು ಮೇಲ್ನೋಟಕ್ಕೆ ಹೇಳಿದರೂ ಇದು ಎರಡೂ ಬಣಗಳ ಶಕ್ತಿ ಪ್ರದರ್ಶನದಂತಿತ್ತು.
ಇದರ ನಡುವೆಯೇ ಭಾನುವಾರ ಸಿದ್ದು-ಡಿಕೆಶಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ದೆಹಲಿಯಲ್ಲಿ ಮತಗಳ್ಳತನದ ವಿರುದ್ಧದ ಹೋರಾಟಕ್ಕಾಗಿ ಇಬ್ಬರೂ ನಾಯಕರು ಭೇಟಿ ನೀಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾರಣ ನೀಡಲಾಗಿದೆ.
ಆದರೆ ಈ ವೇಳೆ ಹೈಕಮಾಂಡ್ ನಾಯಕರ ಜೊತೆ ನಾಯಕತ್ವ ವಿಚಾರ ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಒಂದೆಡೆ ಡಿನ್ನರ್ ಮೀಟಿಂಗ್ ಗಳು ನಡೆಯುತ್ತಿದ್ದರೆ ಇತ್ತ ಡಿಕೆಶಿ-ಸಿದ್ದು ಭೇಟಿ ವೇಳೆ ಹೈಕಮಾಂಡ್ ಏನು ಸಂದೇಶ ರವಾನಿಸಬಹುದು ಎಂಬ ಕುತೂಹಲ ಎರಡೂ ಬಣದಲ್ಲಿದೆ.