ಬೆಳಗಾವಿ: ರಾಜ್ಯದಲ್ಲಿ ಈಗ ಡಿನ್ನರ್ ಮೀಟಿಂಗ್ ಭಾರೀ ಸದ್ದು ಮಾಡುತ್ತಿದೆ. ನಿನ್ನೆ ರಾತ್ರಿ ಆಪ್ತ ಬಳಗದವರೊಂದಿಗೆ ಡಿನ್ನರ್ ಮೀಟಿಂಗ್ ನಡೆಸಿದ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ತಮ್ಮ ಆಪ್ತ ಬಳಗದ 30 ಕ್ಕೂ ಹೆಚ್ಚು ಶಾಸಕರು, ಸಚಿವರೊಂದಿಗೆ ಡಿಕೆ ಶಿವಕುಮಾರ್ ನಿನ್ನೆ ಬೆಳಗಾವಿಯಲ್ಲಿ ಆಪ್ತರ ಮನೆಯಲ್ಲಿ ಡಿನ್ನರ್ ಮೀಟಿಂಗ್ ಮಾಡಿದ್ದರು. ಈ ಬಗ್ಗೆ ಇಂದು ಮಾಧ್ಯಮಗಳು ಕೇಳಿದಾಗ ಅವರು ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.
ಯಾವ ಔತಣಕೂಟನೂ ಇಲ್ಲ, ಅದು ನಮ್ಮ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು ಅವರು. 15 ವರ್ಷದಿಂದ ಕೇಳ್ತಾ ಇದ್ದರು. ಒಂದು ಊಟಕ್ಕೆ ಬನ್ನಿ ಅಂತ. ಒಂದು ವರ್ಷವೇನೋ ಹೋಗಿದ್ವು ಅಷ್ಟೇ. ಅವರು ನಮ್ಮ ಕಾಂಗ್ರೆಸ್ ಪರಿವಾರದವರು. ಮರಿಯಕ್ಕಾಗಲ್ಲ.
ಈಗ ನೋಡಿ ಈ ಹುಡುಗ ಇಲ್ಲಿ ಕೆಲಸ ಮಾಡೋನು. ಈವತ್ತು ರಾಗಿ ಮುದ್ದೆ ಊಟ ತಂದು ಕೊಡ್ತೀನಿ ಎಂದಿದ್ದಾನೆ. ಬೇಡ ಅನ್ನಕ್ಕಾಯ್ತದಾ? ಪ್ರತಿನಿತ್ಯ ಒಬ್ಬೊಬ್ಬರು ಊಟ ತಂದುಕೊಡ್ತೀನಿ ಅಂತಾರೆ ಸ್ಥಳೀಯರು. ಅವರು ಪ್ರೀತಿಯಿಂದ ಕರೀತಾರೆ, ಒಂದೊಂದು ದಿನ ಹೋಗೋದು ಎಂದಿದ್ದಾರೆ.