Publish Date: Tue, 25 Apr 2023 (15:21 IST)
Updated Date: Tue, 25 Apr 2023 (15:10 IST)
ಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರೋಡ್ ಶೋ ನಡೆಸಿದ್ದರು. ಬೊಮ್ಮನಹಳ್ಳಿ ಯ ಸ್ಬಾಮಿ ವಿವೇಕಾನಂದ ಸರ್ಕಲ್‌ನಿಂದ ರೋಡ್ ಶೋ ಆರಂಭಿಸಿದ ಡಿಕೆಶಿ. ಮಂಗಮ್ಮನಪಾಳ್ಯ, ಅಗರ, ಹೆಚ್ ಎಸ್ ಆರ್ ಲೇಔಟ್ ಸೇರಿದಂತೆ ಅನೇಕ ಕಡೆಗಳಲ್ಲಿ ರೋಡ್ ಶೋ ನಡಸಿ. ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದ ಅಭಿವೃದ್ಧಿ ಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮಾಪತಿ ಅವರಿಗೆ ಮತಕೊಟ್ಟು ಗೆಲ್ಲಿಸಬೇಕು ಎಂದು ಹೇಳಿದ್ರು. ಇನ್ನೂ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು. ಮುಖಂಡರು, ನಾಯಕರ ಭಾಗಿಯಾಗಿದ್ರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಸೇರಿದಂತೆ ಅನೇಕ ಹಿರಿಯ ಮುಖಂಡರು ಭಾಗಿಯಾಗಿದ್ರು.ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಮಾತನಾಡಿ ಈ ಭಾಗದಲ್ಲಿ ಉಮಾಪತಿ ಸಾಕಷ್ಟು ಜನ ಸೇವೆಮಾಡಿದ್ದಾರೆ. ಒಂದಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಇನ್ನಷ್ಟು ಬಲ ಬಂದಿದೆ ಖಂಡಿತವಾಗಿ ಇಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ನ ಉಮಾಪತಿ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.