Select Your Language

Notifications

webdunia
webdunia
webdunia
webdunia

ಬಿ.ಎಲ್ ಸಂತೋಷ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ : ಪ್ರಹ್ಲಾದ್ ಜೋಶಿ

ಬಿ.ಎಲ್ ಸಂತೋಷ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ , ಮಂಗಳವಾರ, 25 ಏಪ್ರಿಲ್ 2023 (11:38 IST)
ಹುಬ್ಬಳ್ಳಿ : ಬಿ.ಎಲ್ ಸಂತೋಷ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರು ತಮ್ಮ ಕುಟುಂಬ, ಸಂಸಾರ ತ್ಯಾಗ ಮಾಡಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
 
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಿತ್ತೂರು ಭಾಗದಲ್ಲಿ ಒಂದು ಮೋದಿ ಕಾರ್ಯಕ್ರಮ ನಿಗದಿಯಾಗಿದೆ. ಮೋದಿ ಕಾರ್ಯಕ್ರಮ ಇನ್ನೂ ಎರಡು, ಮೂರು ಜಾಸ್ತಿ ಮಾಡುವಂತೆ ಮನವಿ ಮಾಡಿದ್ದೇವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಹ ಬರಲಿದ್ದಾರೆ ಎಂದರು. 

ಅಮಿತ್ ಶಾ ಇಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ಬರಲಿದ್ದಾರೆ. ನಮ್ಮ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಮತ್ತು ಇತರೆ ಪ್ರಮುಖ ನಾಯಕರ ಜೊತೆಗೆ ಸಭೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತುಗಳನ್ನು ತಿರುಚಿ ವೀರಶೈವ ಲಿಂಗಾಯತರನ್ನು ಎತ್ತಿ ಕಟ್ಟುವ ಪ್ರಯತ್ನವಾಗಿದೆ : ಸಿದ್ದರಾಮಯ್ಯ