ಬೆಂಗಳೂರು: ಐಪಿಎಲ್ 2023 ರಲ್ಲಿ ಖಾಯಂ ನಾಯಕ ಫಾ ಡು ಪ್ಲೆಸಿಸ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಎರಡು ಪಂದ್ಯಗಳಿಗೆ ಆರ್ ಸಿಬಿಯ ನಾಯಕರಾಗಿ ತಂಡ ಮುನ್ನಡೆಸಿದ್ದರು.
ಈ ಎರಡೂ ಪಂದ್ಯಗಳನ್ನೂ ಆರ್ ಸಿಬಿ ರೋಚಕವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ ಅಭಿಮಾನಿಗಳು ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ಹೊಸ ಬೇಡಿಕೆಯಿಟ್ಟಿದ್ದಾರೆ.
ಕೊಹ್ಲಿ ಈ ಮೊದಲು ಆರ್ ಸಿಬಿ ನಾಯಕರಾಗಿದ್ದರು. ಆದರೆ ಕಳೆದ ಎರಡು ಋತುವಿನಿಂದ ಕೊಹ್ಲಿ ನಾಯಕತ್ವ ತ್ಯಜಿಸಿದ್ದರಿಂದ ಫಾ ಡು ತಂಡದ ನಾಯಕರಾಗಿದ್ದಾರೆ. ಇದೀಗ ಸತತ ಎರಡು ಪಂದ್ಯ ಗೆದ್ದ ಬಳಿಕ ಅಭಿಮಾನಿಗಳು ಕೊಹ್ಲಿಯನ್ನೇ ಮತ್ತೆ ಖಾಯಂ ನಾಯಕ ಮಾಡಿ ಎಂದು ಆಗ್ರಹಿಸಿದ್ದಾರೆ.