Select Your Language

Notifications

webdunia
webdunia
webdunia
webdunia

ಮಲ್ಲೇಶ್ವರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ

ಮಲ್ಲೇಶ್ವರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ
bangalore , ಮಂಗಳವಾರ, 25 ಏಪ್ರಿಲ್ 2023 (14:20 IST)
ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ‌. ಕಳೆದ ಬಾರಿಗಿಂತ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಅಶ್ವತ್ ನಾರಾಯಣ ಇನ್ನೂ ಹಚ್ಚಿನ ಅಂತರದಿಂದ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.ಈ ಕುರಿತು ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ ಎಂದು ಕಾಂಗ್ರೆಸ್​ನವರು ಬ್ರಾಹ್ಮಣ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದಾರೆ. ಆದರೆ, ಮಲ್ಲೇಶ್ವರದ ಜನ ಜಾತಿ ಮೀರಿದವರು. ಎಂದೆಂದೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆ. ರಾಹುಲ್ ಗಾಂಧಿ ಕೂಡಲಸಂಗಮ ಬಸವಕಲ್ಯಾಣಕ್ಕೆ ಹೋಗಿ ಬಂದ ಮಾತ್ರಕ್ಕೆ ಏನೂ ವ್ಯತ್ಯಾಸವಾಗುವುದಿಲ್ಲ. ನಿಜವಾದ ಬಸವತತ್ವ ಪಾಲನೆ ಮಾಡುತ್ತಿರುವುದು ಬಿಜೆಪಿಯವರು. ಹಾಗಾಗಿ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.. ಈಗ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಲಿಂಗಾಯತ ಸಮುದಾಯಕ್ಕೆ ನೋವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಡರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್​​ ಸವದಿಗೆ ಪಕ್ಷ ಎಲ್ಲವನ್ನ ಕೊಟ್ಟಿತ್ತು. ಆದರೆ ಟಿಕೆಟ್ ಕಾರಣಕ್ಕೆ ಪಕ್ಷ ಬಿಟ್ಟು ಹೋದರು. ಅಲ್ಲೂ ಕೂಡ ನಾವು ಟಿಕೆಟ್ ಕೊಟ್ಟಿರೋದು ಮತ್ತೊಬ್ಬ ಲಿಂಗಾಯತ ಅಭ್ಯರ್ಥಿಗೆ ತಾನೇ ಎಂದು ಹೇಳಿದ್ರು. ಹೊಸಬರಿಗೆ ಸ್ಥಾನ ಬಿಟ್ಟುಕೊಡುವ ವಿಶಾಲ ಹೃದಯ ಅವರಿಗೆ ಇರಬೇಕಾಗಿತ್ತು. ಈಗ ಅಲ್ಲಿಯೂ ಗೆಲ್ಲೋದು ಬಿಜೆಪಿಯೇ ಅಂತಾ  ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಅಶ್ವತ್ ನಾರಾಯಣ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಲೂಟಿಗಿಂತ ಮೀನು ಹಿಡಿಯುವುದೇ ಲೇಸು