Select Your Language

Notifications

webdunia
webdunia
webdunia
webdunia

ಕರ್ನಾಟಕ ಈ ಚುನಾವಣೆಯಿಂದ ಐತಿಹಾಸಿಕ ಬದಲಾವಣೆ ಖಚಿತ: ಅಣ್ಣಾಮಲೈ

ಕರ್ನಾಟಕ ಈ ಚುನಾವಣೆಯಿಂದ ಐತಿಹಾಸಿಕ ಬದಲಾವಣೆ ಖಚಿತ: ಅಣ್ಣಾಮಲೈ
bangalore , ಮಂಗಳವಾರ, 25 ಏಪ್ರಿಲ್ 2023 (15:00 IST)
ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಹತಾಶೆಯಿಂದ ಕಾಂಗ್ರೆಸ್ಪಕ್ಷ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ.ಆದರೆ ಕರ್ನಾಟಕ ಜನರು ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಕರ್ನಾಟಕ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಹತಾಶೆಯಿಂದ ತಳವಿಲ್ಲದ ಆರೋಪ ಮಾಡುತ್ತಿದೆ. ಕ್ಷೇತ್ರದಲ್ಲಿ ನಮಗೆ ಜನ ಬೆಂಬಲ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮೂರೂವರೆ ವರ್ಷ ಕೆಲಸ ಮಾಡಿದ್ದೇವೆ. ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆ ಕಾಣುತ್ತಿದೆ. ಹೀಗಾಗಿ ಕರ್ನಾಟಕ ಜನ ಈ ಬಾರಿ ಬಿಜೆಪಿಗೆ ಬಹುಮತ ನೀಡಲು ನಿರ್ಧಾರ ಮಾಡಿದ್ದಾರೆ....ಸುದ್ದಿಗೋಷ್ಠಿಯಲ್ಲಿ ಮೇಕದಾಟು ಯೋಜನೆಯ ಬಗ್ಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕೇಂದ್ರದ ತೀರ್ಮಾನದಂತೆ ನಡೆಯುತ್ತೇವೆ. ಕೇಂದ್ರ ಏನು ತೀರ್ಮಾನ ಮಾಡುತ್ತದೆಯೋ ಅದೇ ನಮ್ಮ ನಿಲುವಾಗಲಿದೆ. ಇದರಲ್ಲಿ ಅಂತರಾಜ್ಯ ವಿವಾದ ಇದೆ. ಹೀಗಾಗಿ ಸಂಸತ್ತಿನಲ್ಲಿ ಕೇಂದ್ರ ಏನು ಉತ್ತರ ನೀಡಿದೆಯೋ ಅದೇ ಉತ್ತರವನ್ನು ಇಲ್ಲಿರುವ ಲೀಡರ್ಸ್ ಕೂಡ ಒಪ್ಪಿದ್ದಾರೆ, ತಮಿಳುನಾಡು ಕೂಡ ಒಪ್ಪಿದ್ದಾರೆ. ಇದು ಪ್ರಜಾಪ್ರಭುತ್ವ ಇರುವ ದೇಶ. ಏನೇ ಮಾಡುವಾಗಲೂ ಒಂದು ನಿಯಮ ಇರುತ್ತದೆ. ಆ ನಿಯಮವನ್ನು ತಮಿಳುನಾಡು, ಕರ್ನಾಟಕ ಯಾರೇ ಇರಲಿ ಫಾಲೋ ಮಾಡಬೇಕಾಗುತ್ತದೆ ಎಂದರು

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್​ ಪುತ್ರಿ ಸುಮಾ ವಿಜಯ್ ಬಿಜೆಪಿ ಸೇರ್ಪಡೆ