Select Your Language

Notifications

webdunia
webdunia
webdunia
webdunia

ಅಣ್ಣಾಮಲೈ ವಿರುದ್ಧವೂ ಕಿಡಿಕಾರಿದ ಜಗದೀಶ್ ಶೆಟ್ಟರ್?

ಅಣ್ಣಾಮಲೈ ವಿರುದ್ಧವೂ ಕಿಡಿಕಾರಿದ ಜಗದೀಶ್ ಶೆಟ್ಟರ್?
ಹುಬ್ಬಳ್ಳಿ , ಬುಧವಾರ, 19 ಏಪ್ರಿಲ್ 2023 (10:52 IST)
ಹುಬ್ಬಳ್ಳಿ : ಬಿಜೆಪಿ ಸರ್ಕಾರವಿದ್ದಾಗ ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಿಂದಿನ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು ಎಂದು ಅಣ್ಣಾಮಲೈ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದರು.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿದೆ. ಇದರಿಂದ ಈ ರೀತಿ ಪರಿಸ್ಥಿತಿಯಿದೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಿದ್ದ ಅಣ್ಣಾಮಲೈ ಕರೆದುಕೊಂಡು ಹೋಗಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಆದರೆ ಚುನಾವಣೆಯಲ್ಲಿ ಸೋಲಭವಿಸಿದರು. ಒಂದು ಸಲವು ಚುನಾವಣೆಯಲ್ಲಿ ಗೆಲ್ಲದ ಈ ವ್ಯಕ್ತಿಯನ್ನು ಚುನಾವಣೆಯ ಸಹ ಉಸ್ತುವಾರಿಯಾಗಿ ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಕೋರ್ ಕಮಿಟಿ ಸಭೆಯಲ್ಲಿ ಈವರೆಗೆ ಅಣ್ಣಾಮಲೈ ಒಂದು ಕ್ಷೇತ್ರದ ಬಗ್ಗೆ ವಿಮರ್ಶೆ ಮಾಡಿಲ್ಲ. ಅಂತವರ ಅವರ ಮುಂದೆ ಹಿರಿಯ ನಾಯಕರು ಸಣ್ಣ ಮಕ್ಕಳಂತೆ ಕುಳಿತುಕೊಳ್ಳಬೇಕು. ನಮ್ಮ ಕೈಕೆಳಗೆ ಕೆಲಸ ಮಾಡಿದ ಐಪಿಎಸ್ ಅಧಿಕಾರಿ ಮುಂದೆ ಕುಳಿತಿದ್ದರೆ ಅವರ ಹಿಂದಿನ ಸಾಲಿನಲ್ಲಿ ನಾನು ಮತ್ತು ಸದಾನಂದಗೌಡರು ಕುಳಿತುಕೊಳ್ಳಬೇಕು. ನಾವು ಇಬ್ಬರು ಮಾಜಿ ಮುಖ್ಯಮಂತ್ರಿಗಳು. ಇಂತಹ ಅವಮಾನಗಳನ್ನು ಎದುರಿಸಿದ್ದೇನೆ ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

1 ಕೋಟಿ 65 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ!