ಇವತ್ತು ಬಿಜೆಪಿ ಬಾಗಿಲು ತೆರೆದ್ರೆ ವಾಂತಿ ಬರುತ್ತೆ ಎಂದು ಕೆಆರ್ಪಿಪಿ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.. ಕೊಪ್ಪಳದಲ್ಲಿ ಮಾತನಾಡಿದ ಅವರು, ಇಂದಿನ ರಾಜಕಾರಣದಲ್ಲಿ, ಅದರಲ್ಲೂ ಬಿಜೆಪಿಯಲ್ಲಿ ಕಾಣುವ ಸಿದ್ದಾಂತವೇ ಬೇರೆ.. ಬಿಜೆಪಿಯಿಂದ ಹೊರಬಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಲ್ಲದನ್ನೂ ಹೇಳಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಪಾಪ ಆ ಮಾತು ಹೇಳೋಕೆ ಆಗಲ್ಲ, ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ್ರು. ವಿಧಾನಸೌಧದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ರು, ಕಣ್ಣೀರು ಹಾಕಿಸಿ ಅವರನ್ನು ಹೊರಗಡೆ ಕಳುಹಿಸಿದ್ರು ಎಂದು ಕಿಡಿಕಾರಿದ್ರು.. ಇನ್ನು ಬಿಜೆಪಿ ಈ ರಾಜ್ಯದಲ್ಲಿ ಜನಾರ್ಧನ ರೆಡ್ಡಿಯಿಂದ ಅಧಿಕಾರಕ್ಕೆ ಬಂತು, ಜನಾರ್ಧನ ರೆಡ್ಡಿಯಿಂದಲೇ ಬಾಗಿಲು ಮುಚ್ಚಿಕೊಂಡು ಹೋಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ