Publish Date: Tue, 18 Apr 2023 (19:10 IST)
Updated Date: Tue, 18 Apr 2023 (19:10 IST)
ಕರ್ನಾಟಕದಲ್ಲಿ ಚುನಾವಣಾ ಬಿಸಿ ದಿನೇದಿನೆ ಹೆಚ್ಚುತ್ತಿದೆ, ಅದರ ಜೊತೆಗೆ ಬಂಡಾಯದ ಕಿಡಿ ಕೂಡ ಎಲ್ಲ ರಾಜಕೀಯ ಪಕ್ಷಗಳಲ್ಲಿ ಹತ್ತಿಕೊಂಡಿದೆ. ಇದೀಗ ವಿಜಯನಗರದ ಹರಪನಹಳ್ಳಿಯ ಕಾಂಗ್ರೆಸ್ನಲ್ಲಿ ಬಂಡಾಯದ ಕಿಡಿ ಜೋರಾಗಿದೆ. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಟ್ರೇಶ್ಗೆ ನೀಡಿರುವುದರಿಂದ ಆಕ್ರೋಶ ಭುಗಿಲೆದ್ದಿದೆ. ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಪುತ್ರಿಯರಾದ ಲತಾ ಮಲ್ಲಿಕಾರ್ಜುನ್ ಮತ್ತು ವೀಣಾ ಬಂಡಾಯ ಎದ್ದಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿರುವ ಸಹೋದರಿಯರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.