Publish Date: Tue, 18 Apr 2023 (20:00 IST)
Updated Date: Tue, 18 Apr 2023 (19:31 IST)
ಬಿಜೆಪಿಯ ಕೆಲವರಿಗೆ B.L.ಸಂತೋಷ್ ಟಿಕೆಟ್ ತಪ್ಪಿಸಿದ್ರು ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳುರಿನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಎಲ್.ಸಂತೋಷ್ ಒಬ್ಬರು ಸಂಘಟನಾ ಪ್ರಧಾನ ಕಾರ್ಯದರ್ಶಿ. ಬಿ.ಎಲ್.ಸಂತೋಷ್ ರಾಜ್ಯದಲ್ಲಿ ಹತ್ತಾರು ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ರಾಜ್ಯದ ನಾಡಿಮಿಡಿತ ಗೊತ್ತಿದೆ. ಆದರೆ ಅವ್ರು ಎಷ್ಟು ಪಾತ್ರ ವಹಿಸಿದ್ದಾರೆ ಎಂಬುದು ಗೊತ್ತಿಲ್ಲ.ಬಿ ಎಲ್ ಸಂತೋಷ್ ಅನುಭವ ಕೂಡ ರಾಜ್ಯದ ಬಿಜೆಪಿ ಗೆಲ್ಲೋದಕ್ಕೆ ಸಹಾಯ ಆಗುತ್ತದೆ ಎಂದು ಬಿ.ಎಲ್.ಸಂತೋಷ್ ಬಗ್ಗೆ ಸುರೇಶ್ ಕುಮಾರ್ ಎಚ್ಚರಿಕೆಯ ಮಾತುಗಳನಾಡಿದ್ದಾರೆ