Publish Date: Thu, 27 Nov 2025 (10:36 IST)
Updated Date: Thu, 27 Nov 2025 (10:38 IST)
ಬೆಂಗಳೂರು: ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ.
ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಳಗೊಳಗೇ ತಿಕ್ಕಾಟ ನಡೆಯುತ್ತಿದೆ. ಈ ನಡುವೆ ಇದರ ಲಾಭವನ್ನು ಹೇಗೆ ಪಡೆಯಬಹುದು ಎಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಯೋಜನೆ ಹಾಕುತ್ತಿದೆ.
ಮೊನ್ನೆಯಷ್ಟೇ ಬಿಜೆಪಿ ನಾಯಕ ಸದಾನಂದ ಗೌಡನವರು ಡಿಕೆ ಶಿವಕುಮಾರ್ ನಮಗೆ ಬಾಹ್ಯ ಬೆಂಬಲ ಕೊಡುವುದಿದ್ದರೆ ಸರ್ಕಾರ ರಚಿಸಲು ರೆಡಿ ಎಂದಿದ್ದರು. ಆದರೆ ಆರ್ ಅಶೋಕ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಿಂದ ಬಂದ ನಾಯಕರ ಜೊತೆ ಸರ್ಕಾರ ಮಾಡೋದೇ ಇಲ್ಲ ಎಂದಿದ್ದರು.
ಇದರ ಮಧ್ಯೆ ಇದೀಗ ಡಿಕೆ ಶಿವಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ವಿಪಕ್ಷಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ನಾನು ಅಪ್ಪಟ ಕಾಂಗ್ರೆಸ್ಸಿಗ. ನನ್ನ ಸಂಖ್ಯೆ 140, ಪಕ್ಷ ನನ್ನ ಹಿತ ಕಾಯಲಿದೆ! ಬಿಜೆಪಿ ಹಾಗೂ ಜನತಾದಳದ ನಾಯಕರು ನಮ್ಮ ಪಕ್ಷದ ವಿಚಾರವನ್ನು ಮಾತನಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.