Daily Horoscope

Select Your Language

Notifications

webdunia
webdunia
webdunia
webdunia

ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಕೊಡೋದು: ಹೊರರಾಜ್ಯದವರಿಗೆ ಶಾಕ್ ಕೊಟ್ಟ ಸಿಎಂ ಡಿಕೆ ಶಿವಕುಮಾರ್

DK Shivakumar
ಬೆಂಗಳೂರು: ವೋಟ್ ಇದ್ದವರಿಗೆ ಮಾತ್ರ ನಾವು ಗ್ಯಾರಂಟಿ ಕೊಡೋದು ಎಂದು ಹೊರರಾಜ್ಯದವರು, ಅಕ್ರಮವಾಗಿ ಫಲಾನುಭವಿಗಳಾಗಿರುವವರಿಗೆ ಸಿಎಂ ಡಿಕೆ ಶಿವಕುಮಾರ್ ಶಾಕ್ ಕೊಟ್ಟಿದ್ದಾರೆ.

ಕರ್ನಾಟಕ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಇಂದು ಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಗ್ಯಾರಂಟಿ ಇಡೀ ದೇಶಕ್ಕೇ ಮಾದರಿ. ನಾವು ನಮ್ಮ ರಾಜ್ಯದಲ್ಲಿ ಯಾರಿಗೆ ವೋಟ್ ಇದೆಯೋ ಅವರಿಗೆ ಮಾತ್ರ ಗ್ಯಾರಂಟಿ ಕೊಡೋದು ಎಂದಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ನಡೆಸುತ್ತಿರುವ ರಾಜ್ಯ ಸರ್ಕಾರ ಸದ್ಯದಲ್ಲೇ ಗೃಹಜ್ಯೋತಿ ಯೋಜನೆಯನ್ನೂ ಪರಿಷ್ಕರಿಸಲಿದೆ. ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆಯ ಬಳಿಕ 3.89 ಲಕ್ಷ ಫಲಾನುಭವಿಗಳಿಗೆ ಕೊಕ್ ನೀಡಲಾಗಿದೆ. ಇದೀಗ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯಲ್ಲೂ ಪರಿಷ್ಕರಣೆ ನಡೆಸಲಾಗುತ್ತದೆ.

‘ನಾವು ನಮ್ಮ ರಾಜ್ಯದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡೋದು. ಕರ್ನಾಟಕದಲ್ಲಿ ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಸಿಗಲಿದೆ. ಹೊರ ರಾಜ್ಯದವರಿಗೆ ನಾವು ಯಾಕೆ ಕೊಡಬೇಕು?’ ಎಂದಿದ್ದಾರೆ. ಆ ಮೂಲಕ ಹೊರ ರಾಜ್ಯದ ಐಡಿ ಕಾರ್ಟ್ ಇಟ್ಟುಕೊಂಡು ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿರುವವರಿಗೆ ಸಿಎಂ ಡಿಕೆ ಶಿವಕುಮಾರ್ ಶಾಕ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ