Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಸಿಎಂ ಸ್ಥಾನದ ಬಗ್ಗೆ ಮಹತ್ವದ ಭವಿಷ್ಯ ನುಡಿದ ನೊಣವಿನಕೆರೆ ಅಜ್ಜಯ್ಯ

DK Shivakumar
ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿ ಮುಂದುವರಿಯುವ ಬಗ್ಗೆ ಮತ್ತೆ ನೊಣವಿನಕೆರೆ ಅಜ್ಜಯ್ಯ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಡಿಕೆ ಶಿವಕುಮಾರ್ ಗೆ ನೊಣವಿನಕೆರೆ ಅಜ್ಜಯ್ಯನ ಬಗ್ಗೆ ಭಾರೀ ಭಕ್ತಿ ಮತ್ತು ನಂಬಿಕೆಯಿದೆ. ಸಿಎಂ ಆಗುವ ಮೊದಲು ಮತ್ತು ನಂತರ ಅಜ್ಜಯ್ಯನ ಸಲಹೆ ಪಡೆದಿದ್ದಲ್ಲದೆ, ಪ್ರಮಾಣ ವಚನದ ನಂತರವೂ ಅವರನ್ನು ವಿಧಾನಸೌದದ ಸಿಎಂ ಕಚೇರಿಗೆ ಕರೆಸಿ ಪೂಜೆ ಮಾಡಿಸಿದ್ದರು.

ಇದೀಗ ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ ಬಗ್ಗೆ ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ. ‘ಡಿಕೆ ಶಿವಕುಮಾರ್ ಗೆ ಸದ್ಯಕ್ಕೆ ಯಾವುದೇ ಕಂಟಕವಿಲ್ಲ. ಅವರಿಗೆ ಗುರುವಿನ ಆಶೀರ್ವಾದವಿದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯಾವುದೇ ತೊಂದರೆ ಬಂದರೂ ಗುರುಗಳ ಆಶೀರ್ವಾದದಿಂದ ನಿವಾರಣೆಯಾಗುತ್ತದೆ’ ಎಂದಿದ್ದಾರೆ.

ಸದ್ಯಕ್ಕೆ ಕರ್ನಾಟಕದಲ್ಲಿ ಸಚಿವ ಸ್ಥಾನಕ್ಕಾಗಿ ಹಗ್ಗ ಜಗ್ಗಾಟಗಳು ನಡೆಯುತ್ತಿವೆ. ಆದರೆ ಇದು ಯಾವುದೂ ಡಿಕೆ ಶಿವಕುಮಾರ್ ಸ್ಥಾನಕ್ಕೆ ಬಾಧಕವಾಗದು ಎಂದು ಸ್ವಾಮೀಜಿಗಳು ಸೂಚ್ಯವಾಗಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅನ್ನ ಹಾಕುತ್ತಿದ್ದ ವೃದ್ಧೆ ಮೃತಪಟ್ಟಾಗ ಕೋತಿ ಮಾಡಿದ ಕೆಲಸಕ್ಕೆ ಎಲ್ಲರ ಕಣ್ಣಲ್ಲೂ ನೀರು Video