Select Your Language

Notifications

webdunia
webdunia
webdunia
webdunia

ಏ ಅವೆಲ್ಲಾ ಬೇಡ ಕಣಯ್ಯಾ... ಗಿಫ್ಟ್ ನೋಡಿ ಹೀಗೆ ಹೇಳಿದ್ಯಾಕೆ ಸಿಎಂ ಡಿಕೆ ಶಿವಕುಮಾರ್ Video

CM DK Shivakumar
ಬೆಂಗಳೂರು: ಏ ಅವೆಲ್ಲಾ ಬೇಡ ಕಣಯ್ಯಾ.. ಹೀಗಂತ ತಮಗೆ ಗಿಫ್ಟ್ ನೀಡಿದಾಗ ಸಿಎಂ ಡಿಕೆ ಶಿವಕುಮಾರ್ ನೀಡಿದ ರಿಯಾಕ್ಷನ್ ಈಗ ವೈರಲ್ ಆಗಿದೆ.

ಸಿಎಂ ಆದ ಮೇಲೆ ಡಿಕೆ ಶಿವಕುಮಾರ್ ಅನೇಕ ಕಡೆಗಳಿಗೆ ಭೇಟಿ ನೀಡಿ ಜನರ ಅಭಿಮಾನ ಸ್ವೀಕರಿಸುತ್ತಿದ್ದಾರೆ. ಅದೇ ರೀತಿ ನಿನ್ನೆ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಅಭಿಮಾನಿಗಳ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಗೆ ಸನ್ಮಾನ ಮಾಡಿದ್ದಾರೆ.

ಹಾರ, ತುರಾಯಿ, ಟೋಪಿ ಧರಿಸಿ ಗೌರವಿಸಿದ ಬಳಿಕ ಸಿಎಂ ಕೈಗೆ ಮಂಜುನಾಥ್ ಚಿನ್ನದ ಕಡಗವೊಂದನ್ನು ಹಾಕಲು ಮುಂದಾಗಿದ್ದಾರೆ. ಆಗ ಡಿಕೆ ಶಿವಕುಮಾರ್ ಮೊದಲು ನಿರಾಕರಿಸಿದ್ದಾರೆ. ಕೊನೆಗೆ ಅಲ್ಲಿದ್ದವರೆಲ್ಲಾ ಒತ್ತಾಯ ಮಾಡಿದ್ದು ಇದು ಹೆಂಗಸರು ಹಾಕೋದಲ್ಲ ಸಾರ್ ಗಂಡಸರು ಹಾಕುವಂತದ್ದು ಎಂದು ಒಪ್ಪಿಸಿದ್ದಾರೆ.

ಕೊನೆಗೆ ಒಲ್ಲದ ಮನಸ್ಸಿನಿಂದಲೇ ಸಿಎಂ ಆ ಕಡಗವನ್ನು ಹಾಕಿಕೊಂಡಿದ್ದಾರೆ. ಸಿಎಂ ಮಾತ್ರವಲ್ಲದೆ ಡಿಸಿಎಂ ಪರಮೇಶ್ವರ್, ಯತೀಂದ್ರ ಸಿದ್ದರಾಮಯ್ಯಗೂ ಮಂಜುನಾಥ್ ಕಡಗ ಗಿಫ್ಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯೂಟ್ಯೂಬ್ ನಲ್ಲಿ ಚಿನ್ನಾಭರಣ ಪ್ರದರ್ಶಿಸಿದ ಮಹಿಳೆ: ಮರುಕ್ಷಣವೇ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿಯೇ ಬಿಟ್ರು Video