ನಂದಿನಿ ತುಪ್ಪದ ಬೆಲೆ ಜಾಸ್ತಿ ಮಾಡಿದ್ದೀರಿ ಎಂದರೆ ನೀನು ತುಪ್ಪ ತಿನ್ಬೇಡ ಸುಮ್ನಿರು ಎಂದ ಡಿಕೆ ಶಿವಕುಮಾರ್

Krishnaveni K
ಗುರುವಾರ, 6 ನವೆಂಬರ್ 2025 (10:08 IST)
ಬೆಂಗಳೂರು: ನಂದಿನಿ ತುಪ್ಪದ ಬೆಲೆ ಏರಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನೀನು ತುಪ್ಪ ತಿನ್ಬೇಡ ಸುಮ್ನಿರು ಎಂದಿದ್ದಾರೆ.

ನಂದಿನಿ ತುಪ್ಪದ ಬೆಲೆಯನ್ನು ಪ್ರತೀ ಲೀಟರ್ ಗೆ 90 ರೂ. ನಷ್ಟು ಏರಿಕೆ ಮಾಡಿ ಕೆಎಂಎಫ್ ಪ್ರಕಟಣೆ ನೀಡಿತ್ತು. ಇದರ ಬಗ್ಗೆ ಜನರು, ವಿಪಕ್ಷ ಬಿಜೆಪಿಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಏಕಾಏಕಿ ತುಪ್ಪದ ಬೆಲೆ ಏರಿಕೆ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿವೆ. ನಂದಿನಿ ತುಪ್ಪದ ಬೆಲೆ ಜಾಸ್ತಿ ಮಾಡಿದ್ದೀರಲ್ಲಾ ಸಾರ್ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಡಿಕೆ ಶಿವಕುಮಾರ್ ‘ಅಯ್ಯೋ.. ಬಿಡ್ರೀ ರೈತರಿಗೆ ಒಳ್ಳೆದಾಗುತ್ತದೆ ಎಂದು ಜಾಸ್ತಿ ಮಾಡಿದ್ದಾರೆ. ನೀನು ತುಪ್ಪ ತಿನ್ಬೇಡ ಸುಮ್ನಿರು’ ಎಂದು ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರ ಜಿಎಸ್ ಟಿ ಇಳಿಕೆ ಮಾಡಿದ್ದರಿಂದ ತುಪ್ಪದ ಬೆಲೆ ಇಳಿಕೆಯಾಗಿದೆ ಎಂದು ಖುಷಿಯಲ್ಲಿದ್ದ ಗ್ರಾಹಕರಿಗೆ ಈಗ ರಾಜ್ಯ ತುಪ್ಪದ ಬೆಲೆ ಹೆಚ್ಚಳ ಮಾಡಿರುವುದು ಗಂಟಲು ಸುಡುವಂತೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಾಸಕ ಸತೀಶ್ ಸೈಲ್‌ಗೆ ಮತ್ತೇ ಜೈಲೇ ಗತಿ

ಕೇಂದ್ರದಿಂದಾಗುವ ಪರಿಹಾರಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ರೆ ಹೇಗೆ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿ ಟೀ ಶರ್ಟ್‌ ಒಳಗಡೆ ಕೈ ಹಾಕಿ ವ್ಯಕ್ತಿಯಿಂದ ವಿಕೃತಿ, video

ಮನೆ ಬಿಟ್ಟು ಹೋದ ಪತ್ನಿ, ಮಗಳನ್ನು ಕೊಂದು, ವ್ಯಕ್ತಿ ಮಾಡಿದ್ದೇನು ಗೊತ್ತಾ

ರೈತನ ಕೊಂದು ತೊಡೆ, ತಲೆ ಭಾಗ ತಿಂದು ಹಾಕಿದ ಹುಲಿ, ಮೈಸೂರಿನಲ್ಲಿ ವ್ಯಾಘ್ರ ದಾಳಿಗೆ ಮೂರು ಬಲಿ

ಮುಂದಿನ ಸುದ್ದಿ
Show comments