Publish Date: Sat, 30 Sep 2023 (20:05 IST)
Updated Date: Sat, 30 Sep 2023 (19:08 IST)
ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಜನ ಸಿಡಿದೆದ್ದು ನಿಂತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದ್ದಾರೆ.ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರೋ, ರಾಜ್ಯದ ಬೇರೆ ಭಾಗದ ಜನರೋ ವಾಸ್ತವ ಪರಿಸ್ಥಿತಿ ಅರಿಯದೆ ನೀರು ಬಿಟ್ಟಿದ್ದರೆ ಅವರಿಗೆ ಈ ಭಾಗದ ಜನರ ಕಷ್ಟದ ಅರಿವಿಲ್ಲ ಎನ್ನಬಹುದಿತ್ತು. ಆದರೆ, ಸಿಎಂ ಡಿಸಿಎಂ ಇಬ್ಬರೂ ಈ ಭಾಗದವರೆ ಆಗಿದ್ದರೂ ಅವರಿಗೆ ಜನರ ಸಂಕಷ್ಟದ ಅರಿವಾಗದಿರುವುದು ಎಷ್ಟು ಸರಿ ಹಾಗಾಗಿ ಈ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.