Select Your Language

Notifications

webdunia
webdunia
webdunia
webdunia

ಕಾರಿನಲ್ಲಿ ಅಡಗಿ ಕುಳಿತ ಬಾಲಕ, ಉಸಿರುಗಟ್ಟಿ ಸಾವು..!

ಕಾರಿನಲ್ಲಿ  ಅಡಗಿ ಕುಳಿತ ಬಾಲಕ, ಉಸಿರುಗಟ್ಟಿ ಸಾವು..!
ಜುನಾಗಢ , ಶನಿವಾರ, 30 ಸೆಪ್ಟಂಬರ್ 2023 (15:46 IST)
ಮನೆಗೆ ಹೋದ್ರೆ ತಾಯಿ ಸ್ನಾನ ಮಾಡಿಸ್ತಾಳೆ ಎಂದು ನಿಲ್ಲಿಸಿದ್ದ ಕಾರಿನಲ್ಲಿ ಅಡಗಿ ಕುಳಿತ 5 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ತಾಯಿ ಭಾರತಿ ಆತನನ್ನು ಸ್ನಾನಕ್ಕೆ ಬರುವಂತೆ ಕರೆದಿದ್ದಾಳೆ ಇನ್ನು ಮಗ ಆದಿತ್ಯ ತನಗೆ ಸ್ನಾನ ಮಾಡಿಸುತ್ತಾರೆಂದು ಅಲ್ಲೇ ಹತ್ತಿರದ ಕಾರ್ಖಾನೆಯೊಂದರಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಹತ್ತಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಬಾಗಿಲು ಮುಚ್ಚಿದೆ, ಬಾಗಿಲು ತೆರೆಯುವುದು ಹೇಗೆ ಎಂದು ತೋಚದೆ ಉಸಿರುಕಟ್ಟಿ ಮೃತಪಟ್ಟಿದ್ದಾನೆ. ಕಾರ್ಖಾನೆಯ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಮಗು ಕಾರಿನೊಳಗೆ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ.ಇನ್ನು ಆದಿತ್ಯನನ್ನು ವಾಹನದಿಂದ ಹೊರತರುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕಕ್ಕೆ ಮೆಡಿಕಲ್‌ ಶಾಕ್..!ಹೊಸ ವೈದ್ಯಕೀಯ ಕಾಲೇಜಿಗೆ ಬ್ರೇಕ್?