Select Your Language

Notifications

webdunia
webdunia
webdunia
webdunia

ಕರ್ನಾಟಕಕ್ಕೆ ಮೆಡಿಕಲ್‌ ಶಾಕ್..!ಹೊಸ ವೈದ್ಯಕೀಯ ಕಾಲೇಜಿಗೆ ಬ್ರೇಕ್?

medical college
bangalore , ಶನಿವಾರ, 30 ಸೆಪ್ಟಂಬರ್ 2023 (15:21 IST)
ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಹೊಸ ವೈದ್ಯಕೀಯ ಕಾಲೇಜು ತೆರೆಯಲು ಅಥವಾ ಈಗಿರುವ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿಲ್ಲದಂತೆ ಮಾಡುವ ನೂತನ ನಿಯಮವೊಂದನ್ನು ಕೇಂದ್ರ ಸರ್ಕಾರ ತಂದಿದೆ.ರಾಷ್ಟ್ರೀಯ ವೈದ್ಯಕೀಯ ಆಯೋಗ ಆಗಸ್ಟ್‌ 16ರಂದು ಹೊರಡಿಸಿರುವ ಆದೇಶದ ಪ್ರಕಾರ, ಯಾವುದೇ ರಾಜ್ಯದಲ್ಲಿ ತಲಾ 10 ಲಕ್ಷ ಜನಸಂಖ್ಯೆಗೆ 100 MBBS ಸೀಟುಗಳು ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರಬೇಕು ಎಂಬ ನಿಯಮವಿದೆ. ಆದರೆ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ತೆಲಂಗಾಣವನ್ನು ಒಳಗೊಂಡ ದಕ್ಷಿಣ ಭಾರತದಲ್ಲಿ ಈಗಾಗಲೇ ಈ ಮಿತಿಗಿಂತ ಹೆಚ್ಚು ಮೆಡಿಕಲ್‌ ಸೀಟುಗಳಿವೆ. ಹೀಗಾಗಿ ಇನ್ನು ಕೆಲವು ವರ್ಷಗಳ ಕಾಲ ಈ ರಾಜ್ಯಗಳಲ್ಲಿ ಹೊಸ ಮೆಡಿಕಲ್‌ ಕಾಲೇಜು ಆರಂಭಿಸುವುದು ಹಾಗೂ ಈಗಿರುವ ಕಾಲೇಜುಗಳಲ್ಲಿ ಮೆಡಿಕಲ್‌ ಸೀಟುಗಳ ಪ್ರವೇಶವನ್ನು ಹೆಚ್ಚಿಸುವುದು ಸಾಧ್ಯವಾಗುವುದಿಲ್ಲ ಅಂತಾ ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷದಿಂದ ಯೂಟ್ಯೂಬ್ ಚಾನೆಲ್‌ನಲ್ಲಿದ್ದೇನೆ-ಮೋದಿ