Publish Date: Sat, 30 Sep 2023 (14:46 IST)
Updated Date: Sat, 30 Sep 2023 (13:20 IST)
ಮುಂಬೈನಲ್ಲಿ ಯೂಟ್ಯೂಬ್ ಫ್ಯಾನ್ ಫೆಸ್ಟ್ ಇಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾರತದ ಯೂಟ್ಯೂಬರ್ಸ್‌ಗೆ ಮಹತ್ವದ ಸಂದೇಶ ನೀಡಿದ್ದಾರೆ. ಮೋದಿ ವಿಡಿಯೋ ಪ್ಲೇ ಆಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದವರಿಂದ ಹರ್ಷೋದ್ಘಾರ ಮೂಡಿತ್ತು.ನನ್ನ ಆತ್ಮೀಯ ಯೂಟ್ಯೂಬರ್ಸ್, ಇಂದು ನಾನು ಫೆಲೋ ಯೂಟ್ಯೂಬರ್ಸ್ ರೂಪದಲ್ಲಿ ಈ ಕಾರ್ಯಕ್ರಮದ ಮೂಲಕ ನಿಮ್ಮ ಜೊತೆ ಮಾತನಾಡಲು ಅತೀವ ಸಂಸತವಾಗುತ್ತಿದೆ. ನಾನು ಕೂಡ ನಿಮ್ಮಂತೆ. ನಿಮಗಿಂತ ನಾನು ಭಿನ್ನವಾಗಿಲ್ಲ. ಕಳೆದ 15 ವರ್ಷಗಳಿಂದ ನಾನು ಕೂಡ ಯ್ಯೂಟೂಬ್ ಚಾನೆಲ್ ಮೂಲಕ ದೇಶದ ಜನತೆ ಹಾಗೂ ವಿಶ್ವದ ಸಂಪರ್ಕದಲ್ಲಿದ್ದೇನೆ. ನನ್ನ ಯೂಟ್ಯೂಬ್ ಚಾನೆಲ್‌ಗೆ ಬಹಳ ಮಂದಿ ಸಬ್‌ಸ್ಕ್ರೈಬರ್ ಆಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.