Select Your Language

Notifications

webdunia
webdunia
webdunia
webdunia

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ

narendra modhi
bangalore , ಗುರುವಾರ, 28 ಸೆಪ್ಟಂಬರ್ 2023 (16:20 IST)
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನಸಾಮಾನ್ಯರ ಬಯಕೆಯಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಶಾಸಕ ಬಿ.ಸುರೇಶಗೌಡ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಅಕ್ಟೀವ್ ಇದ್ದಷ್ಟು ಹೆಚ್ಚು ಮತದಾರರನ್ನು ತಲುಪಲು ಸಾಧ್ಯ ಎಂದರು. ಕಾಂಗ್ರೆಸ್​​ನ ಬಿಟ್ಟಿ ಭಾಗ್ಯಗಳಿಗೆ ಮನಸೋತು ಮತ ನೀಡಿದ ರಾಜ್ಯದ ಜನತೆ ಕೇವಲ ಮೂರು ತಿಂಗಳಲ್ಲಿ ಕಾಂಗ್ರೆಸ್ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿಗೆ ಒಂದು ನೈಯಾಪೈಸೆ ಹಣ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಗುಂಡಿ ಬಿದ್ದಿರುವ ರಸ್ತೆಗೆ ಒಂದು ಗುದ್ದಲಿ ಮಣ್ಣು ಹಾಕಲು ಸರಕಾರದ ಬಳಿ ಹಣವಿಲ್ಲ. ಇಂತಹ ವಿಚಾರಗಳು ಜನರಿಗೆ ತಲುಪಿಸುವ ಜವಾಬ್ದಾರಿ ಸೋಷಿಯಲ್ ಮೀಡಿಯಾ ಸೈನಿಕರ ಮೇಲಿದೆ. ನಿಮಗೆ ನೀವೇ ಸೇನಾಧಿಪತಿಗಳು ಹೆಚ್ಚು ನಿಮ್ಮ ಸೈನಿಕ ಪಡೆಯನ್ನು ಸಕ್ರಿಯಗೊಳಿಸಿಕೊಂಡಷ್ಟು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ಹೆಚ್ಚಿರುತ್ತದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯ ಬಂದ್ ಗೆ ಖಾಸಗಿ ಬಸ್ ಮಾಲೀಕರಿಂದ ನೈತಿಕ ಬೆಂಬಲ