Select Your Language

Notifications

webdunia
webdunia
webdunia
webdunia

ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷ ಗುಳುಂ

ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷ ಗುಳುಂ
ಉತ್ತರಪ್ರದೇಶ , ಶನಿವಾರ, 30 ಸೆಪ್ಟಂಬರ್ 2023 (14:20 IST)
ಹಣವನ್ನು ಮನೆಯಲ್ಲಿಟ್ಟರೆ  ಸೇಫ್ ಅಲ್ಲ ಎಂಬ ಕಾರಣಕ್ಕೆ ಜನ ತಮ್ಮ ಬಳಿ ಇರುವ ಅಮೂಲ್ಯ ನಿಧಿಯನ್ನು ಬ್ಯಾಂಕ್ ಲಾಕರ್‌ ಗಳಲ್ಲಿ ಇಡುತ್ತಾರೆ. ಅದೇ ರೀತಿ ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 18 ಲಕ್ಷವನ್ನು ಗೆದ್ದಲು ಹುಳುಗಳು ತಿಂದು ಹಾಳು ಮಾಡಿದ್ದು,  ಇದರಿಂದ ಹಣ ಕೂಡಿಡಲು ಬ್ಯಾಂಕ್ ಲಾಕರ್ ಕೂಡ ಸುರಕ್ಷಿತ ಅಲ್ಲ ಎಂದು ಸಾಬೀತಾಗಿದೆ.ಇನ್ನು ಇದರಿಂದ ಹಣ ಇಟ್ಟಿದ್ದ ಮಹಿಳೆ ಸಂಕಷ್ಟಕ್ಕೀಡಾಗಿದ್ದಾರೆ.ಮೊರದಾಬಾದ್ ಮೂಲದ ಮಹಿಳೆ ಅಲ್ಕಾ ಪಾಠಕ್ ಎಂಬುವವರು, ತಮ್ಮ ಮಗಳ ಮದುವೆಗಾಗಿ 18 ಲಕ್ಷ  ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದರು. ಒಂದೂವರೆ ವರ್ಷದ ಹಿಂದೆ ಅವರು ಈ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದು,ಲಾಕರ್ ತೆಗೆದು ನೋಡಿದಾಗ ಎಲ್ಲ ಹಣವನ್ನು ಗೆದ್ದಲು ಹುಳುಗಳು ತಿಂದಿರುವುದು ಗಮನಕ್ಕೆ  ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ಮೇಲೆ ಡಾ.ಸಿ.ಎನ್. ಅಶ್ವತ್ಥನಾರಾಯಣ ಕೆಂಡಾಮಂಡಲ