Publish Date: Sat, 30 Sep 2023 (13:21 IST)
Updated Date: Sat, 30 Sep 2023 (13:10 IST)
ಮಣಿಪುರದಲ್ಲಿ ಮಹಿಳೆಯರ ರೇಪ್ ಘಟನೆ ದೇಶವನ್ನು ಸಂಚಲನ ಸೃಷ್ಟಿಸಿದ್ದ ಬಳಿಕ ಅದೇ ರೀತಿಯ ಘಟನೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಡೆದಿದೆ. ಇಲ್ಲಿ 12 ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ದೈಹಿಕ ಹಿಂಸೆ ಅನುಭವಿಸಿದ ಬಳಿಕ ಬಾಲಕಿ ಅರೆಬೆತ್ತಲೆಯಾಗಿ ರಕ್ತಸಿಕ್ತ ದೇಹದೊಂದಿಗೆ ನಡೆದುಬರುತ್ತಿದ್ದು, ತಾನು ಬರವ ಮಾರ್ಗದಲ್ಲಿದ್ದ ಪ್ರತಿ ಮನೆಯ ಬಾಗಿಲಿಗೂ ಹೋಗಿ ಸಹಾಯಕ್ಕೆ ಅಂಗಲಾಚಿದ್ದಾಳೆ. ಈ ವೇಳೆ ಮನೆಯ ಮುಂದೆ ನಿಂತಿದ್ದ ವ್ಯಕ್ತಿಗಳು ಆಕೆಯನ್ನು ನೋಡುತ್ತಿದ್ದರೆ, ಹೊರತು, ಮಾನವೀಯತೆ ಮೆರೆದು ಕನಿಷ್ಠ ಸಹಾಯ ಮಾಡುವ ಗೋಜಿಗೂ ಹೋಗಲಿಲ್ಲ.ಇನ್ನು ಬಾಲಕಿಯು ರಸ್ತೆ ಬೀದಿಯಲ್ಲಿ ನಡೆದುಕೊಂಡು ಹೋಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.