Publish Date: Sun, 17 Sep 2023 (15:00 IST)
Updated Date: Sun, 17 Sep 2023 (15:54 IST)
ನಸುಕಿನ ಜಾವ 5 ಗಂಟೆ ಸುಮಾರಿಗೆ ಯಾದಗಿರಿ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ ಹರಿದು 25 ಕುರಿಗಳು ಸಾವಿಗೀಡಾಗಿವೆ. ಯಾದಗಿರಿ ಸಂಚಾರ ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕುರಿಗಾಯಿಗಳು ಕುರಿ ಮೇಯಿಸಲು ರಸ್ತೆ ದಾಟಿ ಹೋಗುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಟ್ರಕ್ ಕುರಿಗಳ ಮೇಲೆ ಹರಿದಿದೆ. ಇದರಿಂದ ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬ ಕುರಿಗಾಯಿಗಳಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.