Select Your Language

Notifications

webdunia
webdunia
webdunia
webdunia

ತಾಲಿಬಾನ್ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಚೀನಾ

ತಾಲಿಬಾನ್ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಚೀನಾ
ಕಾಬೂಲ್ , ಗುರುವಾರ, 14 ಸೆಪ್ಟಂಬರ್ 2023 (13:11 IST)
ಕಾಬೂಲ್ : ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಚೀನಾದ ಹೊಸ ರಾಯಭಾರಿಯನ್ನು ಸ್ವಾಗತಿಸಿದೆ. ತಾಲಿಬಾನ್ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಜಗತ್ತಿನ ಮೊದಲ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.
 
2021 ರಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ಗೆ ರಾಯಭಾರಿಯೊಬ್ಬರಿಗೆ ಇಂತಹ ಅದ್ದೂರಿ ಸ್ವಾಗತ ನೀಡಿರುವುದು ಇದೇ ಮೊದಲು. ಹೊಸ ರಾಯಭಾರಿಯ ಆಗಮನವು ಇತರ ರಾಷ್ಟ್ರಗಳು ಮುಂದೆ ಬರಲು ಮತ್ತು ತಾಲಿಬಾನ್ ನೇತೃತ್ವದ ಸರ್ಕಾರದೊಂದಿಗೆ ಸಂಬಂಧ ಸ್ಥಾಪಿಸುವ ಸಂಕೇತವಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ. 

ಚೀನಾ ರಾಯಭಾರಿ ಝಾವೋ ಅವರಿಗೆ ಅಫ್ಘಾನ್ ಸೈನಿಕರು ಸ್ವಾಗತ ಕೋರಿದರು. ಆಡಳಿತದ ಮುಖ್ಯಸ್ಥರಾದ ಮೊಹಮ್ಮದ್ ಹಸನ್ ಅಖುಂಡ್ ಮತ್ತು ವಿದೇಶಾಂಗ ಸಚಿವ ಮುತಾಕಿ ಸೇರಿದಂತೆ ಉನ್ನತ ಶ್ರೇಣಿಯ ತಾಲಿಬಾನ್ ಅಧಿಕಾರಿಗಳನ್ನು ರಾಯಭಾರಿ ಭೇಟಿ ಮಾಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ನಿಫಾ ವೈರಸ್ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ !