ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್ ಅನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಖರೀದಿಸುತ್ತಿದ್ದಂತೆ, ಆ ಕಂಪನಿಯ ಸಿಇಒ ಆಗಿದ್ದ ಭಾರತೀಯ ಮೂಲದ ಪರಾಗ್ ಅಗರ್ ವಾಲ್ ಅವರನ್ನು ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಜಾಗೊಳಿಸಿದ್ದರು. ಆ ನಿರ್ಧಾರವನ್ನು ಕೈಗೊಂಡಿದ್ದು ಏಕೆ ಎಂಬುದರ ಬಗ್ಗೆ ಮಸ್ಕ್ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಟ್ವೀಟರ್ ಖರೀದಿಸುವುದಕ್ಕೂ ಮುನ್ನ ಪರಾಗ್ ಅವರನ್ನು 2022ರಲ್ಲಿ ಔತಣಕೂಟದ ನೆಪದಲ್ಲಿ ಭೇಟಿಯಾಗಿದ್ದೆ. ಪರಾಗ್ ಅವರ ವ್ಯಕ್ತಿತ್ವ ನನ್ನನ್ನು ಪ್ರಭಾವಿಸಲಿಲ್ಲ. ಪರಾಗ್ ಒಳ್ಳೆಯ ವ್ಯಕ್ತಿಯೇ ಆಗಿದ್ದರು. ಆದರೆ ಸಿ.ಇ.ಒ ಆಗಲು ಅದು ಕಾರಣವಾಗುವುದಿಲ್ಲ. ಸಿಇಒ ಆಗಲು ಎಲ್ಲ ಜನರೂ ಮೆಚ್ಚಿಕೊಳ್ಳಬೇಕು ಎಂದೇನೂ ಇಲ್ಲ. ಟ್ವೀಟರ್ಗೆ ಬೆಂಕಿ ಉಸಿರಾಡುವ ಡ್ರ್ಯಾಗನ್ ಬೇಕಾಗಿತ್ತು. ಆದರೆ ಪರಾಗ್ ಅದಾಗಿರಲಿಲ್ಲ ಎಂದು ಮಸ್ಕ್ ತಮ್ಮ ಎಕ್ಸ ಖಾತೆಯಲ್ಲಿ ತಿಳಿಸಿದ್ದಾರೆ.